ADVERTISEMENT

ಷವೊಮಿ EV ಕಾರುಗಳು 2027ರಿಂದ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ: ಸಿಇಒ ಲೀ

ರಾಯಿಟರ್ಸ್
Published 2 ಜುಲೈ 2025, 15:11 IST
Last Updated 2 ಜುಲೈ 2025, 15:11 IST
<div class="paragraphs"><p>ಷವೊಮಿ ವೈಯು7</p></div>

ಷವೊಮಿ ವೈಯು7

   

ಬೀಜಿಂಗ್‌: ಸ್ಮಾರ್ಟ್‌ಫೋನ್ ತಯಾರಿಸುವ ಷವೊಮಿ ಕಂಪನಿಯು ವಿದ್ಯುತ್ ಚಾಲಿತ ಕಾರುಗಳನ್ನೂ ಅಭಿವೃದ್ಧಿಪಡಿಸುತ್ತಿದ್ದು, 2027ರಿಂದ ಜಗತ್ತಿನ ಇತರ ರಾಷ್ಟ್ರಗಳಿಗೂ ರಫ್ತು ಮಾಡುವ ಯೋಜನೆ ಹೊಂದಿದೆ ಎಂದು ಕಂಪನಿಯ ಮುಖ್ಯ ಕಾರ್ನಿರ್ವಹಣಾಧಿಕಾರಿ ಲೀ ಜುನ್ ಬುಧವಾರ ಹೇಳಿದ್ದಾರೆ.

ಷವೊಮಿ ಕಂಪನಿಯು ತನ್ನ ಗಮನವನ್ನು ಸದ್ಯ ಚೀನಾ ಮಾರುಕಟ್ಟೆಗಷ್ಟೇ ಕೇಂದ್ರೀಕರಿಸಿದೆ. ಇತ್ತೀಚಿಗೆ ಬಿಡುಗಡೆಯಾದ SU7 ಮತ್ತು YU7 ಕಾರುಗಳಿಗೆ ಜಾಗತಿಕ ಮಾರುಕಟ್ಟೆಯಿಂದಲೂ ಸಾಕಷ್ಟು ಬೇಡಿಕೆ ಬಂದಿದೆ.

ADVERTISEMENT

ಈ ನಿಟ್ಟಿನಲ್ಲಿ 2027ರಿಂದ ಷವೊಮಿ ಇವಿ ಕಾರುಗಳನ್ನು ಬೇಡಿಕೆ ಇರುವ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು. ಡಿಸೆಂಬರ್‌ನಿಂದ ಇಲ್ಲಿಯವರೆಗೆ ಷವೊಮಿ ಎಲೆಕ್ಟ್ರಿಕ್‌ ಎಸ್‌ಯು7 ಸೆಡಾನ್‌ ಮಾರಾಟವು ಟೆಸ್ಲಾ ಮಾಡೆಲ್‌ 3ಗಿಂತಲೂ ಹೆಚ್ಚು ಮಾರಾಟವಾಗಿವೆ. ಎಸ್‌ಯುವಿ ವೈಯು7 ಕಾರಿಗೂ ಸಾಕಷ್ಟು ಬೇಡಿಕೆ ಬಂದಿದೆ. ಕಳೆದ ಗುರುವಾರ ಈ ಮಾದರಿ ಬಿಡುಗಡೆಗೊಂಡಿದ್ದು, ಆರಂಭದ 18 ಗಂಟೆಗಳಲ್ಲೇ ಗರಿಷ್ಠ ಮಾರಾಟ ಕಂಡಿದೆ ಎಂದು ಅವರು ಹೇಳಿದ್ದಾರೆ.

‘ಸದ್ಯ ಬೇಡಿಕೆ ಹೆಚ್ಚು ಇದ್ದು, ವೈಯು7 ಕಾರು ಪಡೆಯಲು ಮುಂಗಡ ಕಾಯ್ದಿರಿಸಿರುವ ಗ್ರಾಹಕರು ಒಂದು ವರ್ಷ ಕಾಯಬೇಕಾಗಿದೆ. ಹೀಗಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು’ ಎಂದು ಲೀ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.