ADVERTISEMENT

ಭಾರತ್‌ ಗ್ಯಾಸ್‌ನಿಂದ ಕ್ವಿಡ್‌ ಕಾರು ಬಹುಮಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 16:08 IST
Last Updated 28 ಅಕ್ಟೋಬರ್ 2021, 16:08 IST
   

ಬೆಂಗಳೂರು: ಭಾರತ್‌ ಗ್ಯಾಸ್ ಕಂಪನಿಯುಹೊಸಕೋಟೆಯ ಕೂಲಿ ಕಾರ್ಮಿಕ ಚಿಕ್ಕರಾಜಪ್ಪ ಅವರಿಗೆ ರೆನೊ ಕ್ವಿಡ್ ಕಾರನ್ನು ಬಹುಮಾನವಾಗಿ ನೀಡಿದೆ.

ಭಾರತ್ ಗ್ಯಾಸ್ ಕಂಪನಿಯ ಬೆಂಗಳೂರು ವಿಭಾಗವು ಒಂದು ಎಲ್‌ಪಿಜಿ ಸಂಪರ್ಕ ಪಡೆದವರು ಇನ್ನೊಂದು ಎಲ್‌ಪಿಜಿ ಸಂಪರ್ಕ ಪಡೆಯುವುದನ್ನು ಪ್ರೋತ್ಸಾಹಿಸಲು ಮೂರು ತಿಂಗಳ ಕಾಲ ಅಭಿಯಾನ ಹಮ್ಮಿಕೊಂಡಿತ್ತು. ಈ ಅಭಿಯಾನದಲ್ಲಿ ಒಟ್ಟು 30 ಸಾವಿರ ಗ್ರಾಹಕರು ಪಾಲ್ಗೊಂಡಿದ್ದರು.

ಎಲ್‌ಪಿಜಿ ಸಿಲಿಂಡರ್‌ ಬಳಸುವ ಬಡ ಗ್ರಾಹಕರಿಗೆ ಅಭಿಯಾನದ ಸಂದರ್ಭದಲ್ಲಿ ಕೂಪನ್ ವಿತರಿಸಲಾಗಿತ್ತು. ಲಕ್ಕಿ ಡ್ರಾನಲ್ಲಿ ವಿಜೇತರಾದವರಿಗೆ ಈಚೆಗೆ ಬಹುಮಾನ ವಿತರಿಸಲಾಯಿತು. ವಿಜೇತರಾದ ಒಟ್ಟು 75 ಕುಟುಂಬಗಳಿಗೆ ಕಾರು, ಸ್ಕೂಟರ್ ಸೇರಿ ಒಟ್ಟು ₹ 10 ಲಕ್ಷ ಮೌಲ್ಯದ ಬಹುಮಾನ ನೀಡಲಾಯಿತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಈ ವರ್ಷದ ಜನವರಿಯಿಂದ ಏಪ್ರಿಲ್ 20ರವರೆಗೆ ಅಭಿಯಾನ ನಡೆದಿತ್ತು. ಭಾರತ್ ಗ್ಯಾಸ್‌ನ ದಕ್ಷಿಣ ಭಾರತದ ಪ್ರಾದೇಶಿಕ ವಿಭಾಗದ ಎಲ್‌ಪಿಜಿ ವ್ಯವಸ್ಥಾಪಕ ಎಸ್. ಧನಪಾಲ್, ಕರ್ನಾಟಕ ವಿಭಾಗದ ಮುಖ್ಯಸ್ಥ ಮನೋಜ್ ಕುಮಾರ್ ಗುಪ್ತಾ, ಪ್ರಾದೇಶಿಕ ವ್ಯವಸ್ಥಾಪಕ ಭರತ್ ಕುಮಾರ್ ರಾಯಗರ್ ಅವರು ಬಹುಮಾನಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.