ADVERTISEMENT

ಭಾರತದಲ್ಲಿ ಹಾರುವ ಕಾರು! ಗುಜರಾತ್‌ನಲ್ಲಿ ಘಟಕ ಸ್ಥಾಪನೆ, 2021ರಿಂದ ತಯಾರಿಕೆ

ಪಿಟಿಐ
Published 10 ಮಾರ್ಚ್ 2020, 16:14 IST
Last Updated 10 ಮಾರ್ಚ್ 2020, 16:14 IST
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ   

ಅಹಮದಾಬಾದ್‌: ನೆದರ್ಲೆಂಡ್‌ನ ‘ಪಿಎಎಲ್‌–ವಿ’ ಕಂಪನಿಯು ಹಾರಾಡುವ ಕಾರುಗಳನ್ನು ಭಾರತದಲ್ಲಿ ತಯಾರಿಸಲಿದೆ.

ಗುಜರಾತ್‌ನಲ್ಲಿ ಘಟಕವನ್ನು ಸ್ಥಾಪಿಸಲಿರುವ ಪರ್ಸನಲ್‌ ಏರ್‌ ಲ್ಯಾಂಡ್‌ ವೆಹಿಕಲ್‌ (ಪಿಎಎಲ್–ವಿ) ಕಂಪನಿಯು, 2021ರಿಂದ ಕಾರುಗಳನ್ನು ತಯಾರಿಸುವ ಗುರಿ ಹೊಂದಿದೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾಣಿ ಸಮ್ಮುಖದಲ್ಲಿ ರಾಜ್ಯದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ದಾಸ್‌ ಮತ್ತು ಪಿಎವಿಲ್‌–ವಿ ಕಂಪನಿಯ ಉಪಾಧ್ಯಕ್ಷ ಕಾರ್ಲೊ ಮಾಸ್ಬೊಮ್ಮೆಲ್‌ ಒಪ್ಪಂದಕ್ಕೆ ಸಹಿ ಹಾಕಿದರು.

ADVERTISEMENT

‘ಜಾಗತಿಕ ದರ್ಜೆಯ ಮೂಲ ಸೌಕರ್ಯಗಳು, ಸುಲಲಿತ ವ್ಯಾಪಾರದ ವಾತಾವರಣ ಮತ್ತು ಉತ್ತಮ ಬಂದರು ಹಾಗೂ ಸಾರಿಗೆ ಸಂಚಾರ ಸೌಲಭ್ಯಗಳು ಇರುವುದರಿಂದ ಗುಜರಾತ್‌ ಅನ್ನು ನಮ್ಮ ಕಂಪನಿ ಆಯ್ಕೆ ಮಾಡಿಕೊಂಡಿದೆ’ ಎಂದು ಕಾರ್ಲೋ ತಿಳಿಸಿದ್ದಾರೆ.

‘ಇಲ್ಲಿ ತಯಾರಿಸುವ ಕಾರುಗಳನ್ನು ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು ಸೇರಿದಂತೆ ಇತರೆಡೆ ರಫ್ತು ಮಾಡಲಾಗುವುದು. ಈಗಾಗಲೇ 110 ಕಾರುಗಳನ್ನು ರಫ್ತು ಮಾಡುವಂತೆ ಬೇಡಿಕೆ ಬಂದಿದೆ’ ಎಂದು ಅವರು ತಿಳಿಸಿದ್ದಾರೆ.

‘ಎರಡು ಎಂಜಿನ್‌ಗಳನ್ನು ಹೊಂದಿರುವ ಹಾರಾಡುವ ಈ ಕಾರು, ರಸ್ತೆ ಮೇಲೆ 160 ಕಿಲೋ ಮೀಟರ್‌ ವೇಗದಲ್ಲಿ ಸಂಚರಿಸುವ ಮತ್ತು 180 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಕೇವಲ ಮೂರು ನಿಮಿಷದಲ್ಲಿ ಕಾರು ಹಾರಾಟ ನಡೆಸುವ ವಾಹನವಾಗಿ ಪರಿವರ್ತನೆಗೊಳ್ಳಲಿದೆ. ಒಂದು ಸಲ ಟ್ಯಾಂಕ್‌ ಸಂಪೂರ್ಣ ಭರ್ತಿ ಮಾಡಿದರೆ 500 ಕಿಲೋ ಮೀಟರ್‌ ದೂರ ಸಂಚರಿಸಲಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.