ನವದೆಹಲಿ: ಓಲಾ ಎಲೆಕ್ಟ್ರಿಕ್ ಕಂಪನಿಯ ಇ–ಸ್ಕೂಟರ್‌ಗಳ ಮಾರಾಟ ಮತ್ತು ನೋಂದಣಿಯಲ್ಲಿ ಕಂಡುಬಂದಿರುವ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನಿಖೆಗೆ ಆದೇಶಿಸಿದೆ.
ಕಂಪನಿಯ ದ್ವಿಚಕ್ರವಾಹನಗಳ ಮಾರಾಟ ಮತ್ತು ನೋಂದಣಿಯಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಗ್ರಾಹಕರೊಬ್ಬರು ದೂರು ನೀಡಿದ್ದರು. ಇದರ ಆಧಾರದ ಮೇಲೆ ತನಿಖೆ ನಡೆಸಿ 15 ದಿನದೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು, ಭಾರತೀಯ ಮೋಟಾರು ವಾಹನ ಸಂಶೋಧನಾ ಸಂಸ್ಥೆಗೆ (ಎಆರ್‌ಎಐ) ಸೂಚಿಸಿದೆ.
ಫೆಬ್ರುವರಿಯಲ್ಲಿ ವಾಹನ್ ಪೋರ್ಟಲ್‌ನಲ್ಲಿ ಕಂಪನಿಯ 8,652 ದ್ವಿಚಕ್ರವಾಹನಗಳು ನೋಂದಣಿಯಾಗಿವೆ. ಆದರೆ, ಕಂಪನಿಯು ಈ ಅವಧಿಯಲ್ಲಿ 25 ಸಾವಿರ ಮಾರಾಟವಾಗಿವೆ ಎಂದು ಹೇಳಿತ್ತು. ಗುರುವಾರದವರೆಗೆ 11,781 ದ್ವಿಚಕ್ರವಾಹನಗಳು ನೋಂದಣಿಯಾಗಿವೆ.
ಓಲಾ ಎಲೆಕ್ಟ್ರಿಕ್ ಫೇಮ್– 2 ಮತ್ತು ಪಿಎಂ ಇ–ಡ್ರೈವ್ ಯೋಜನೆಯ ಫಲಾನುಭವಿಯಾಗಿದೆ. ಈ ಸಂಬಂಧ ಎಆರ್‌ಎಐ ಅರ್ಹತಾ ಪ್ರಮಾಣ ಪತ್ರ ನೀಡಿದೆ.
ಇ–ಸ್ಕೂಟರ್‌ನ ಗುಣಮಟ್ಟ ಹಾಗೂ ಮಾರಾಟ ಸೇವೆಯಲ್ಲಿನ ಲೋಪ ಸಂಬಂಧ ಕಂಪನಿ ವಿರುದ್ಧ ಈ ಹಿಂದೆ ಗ್ರಾಹಕರು ದೂರು ದಾಖಲಿಸಿದ್ದರು. ಈ ಬಗ್ಗೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ತನಿಖೆಗೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.