ವಿದ್ಯುತ್ ಚಾಲಿತ ವಾಹನ
ಸಾಂಕೇತಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರವು ಪಿಎಂ ಇ–ಡ್ರೈವ್ ಯೋಜನೆಯಡಿ ಎರಡನೇ ಹಂತದಲ್ಲಿ ಸರಕು ಸಾಗಣೆ ಇ–ಆಟೊರಿಕ್ಷಾ ಖರೀದಿದಾರರಿಗೆ ಸಬ್ಸಿಡಿ ಸೌಲಭ್ಯವನ್ನು ವಿಸ್ತರಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್5 ವರ್ಗಕ್ಕೆ ಸೇರಿದ (ಸರಕು ಸಾಗಣೆ ತ್ರಿಚಕ್ರವಾಹನ) ವಾಹನಗಳಿಗೆ ಸಬ್ಸಿಡಿ ನೀಡಲಾಗುತ್ತಿದ್ದು, ನವೆಂಬರ್ 7ರ ವರೆಗೆ 80 ಸಾವಿರ ವಾಹನಗಳು ನೋಂದಣಿ ಮಾಡಿಕೊಂಡಿವೆ.
ಇ–ಆಟೊರಿಕ್ಷಾ ಸೇರಿ ತ್ರಿಚಕ್ರ ವಾಹನಗಳಿಗೆ ನೀಡುವ ಸಬ್ಸಿಡಿಗೆ 80,546 ವಾಹನಗಳು ನೋಂದಣಿ ಮಾಡಿಕೊಂಡಿವೆ. ವಾಹನಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.