ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಜನವರಿಯಿಂದ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಹೀರೊ ಮೊಟೊಕಾರ್ಪ್ ಮತ್ತು ಫೋಕ್ಸ್ವ್ಯಾಗನ್ ಕಂಪನಿಗಳು ಗುರುವಾರ ಹೇಳಿವೆ.
ತನ್ನ ಎಲ್ಲ ಮಾದರಿಯ ವಾಹನಗಳ ಎಕ್ಸ್ ಷೋರೂಂ ದರವುಜನವರಿ 4ರಿಂದ ಜಾರಿಗೆ ಬರುವಂತೆ ₹ 2 ಸಾವಿರದವರೆಗೆ ಏರಿಕೆ ಆಗಲಿದೆ ಎಂದು ಹೀರೊ ಮೊಟೊಕಾರ್ಪ್ ಪ್ರಕಟಣೆಯಲ್ಲಿ ತಿಳಿಸಿದೆ. ಪೋಲೊ, ವೆಂಟೊ ಮತ್ತು ಟೈಗುನ್ ಮಾದರಿಗಳ ಬೆಲೆಯು ಶೇಕಡ 2ರಿಂದ ಶೇ 5ರವರೆಗೂ ಏರಿಕೆ ಆಗಲಿದೆ ಎಂದು ಫೋಕ್ಸ್ವ್ಯಾಗನ್ ಕಂಪನಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.