ADVERTISEMENT

ಇಂದಿನಿಂದ ಮಾರುತಿ ಸುಜುಕಿ ಕಾರು ಮತ್ತಷ್ಟು ದುಬಾರಿ

ಏಜೆನ್ಸೀಸ್
Published 16 ಜನವರಿ 2023, 6:42 IST
Last Updated 16 ಜನವರಿ 2023, 6:42 IST
   

ಬೆಂಗಳೂರು: ‌ಕಾರು ಉತ್ಪಾದಕ ಮಾರುತಿ ಸುಜುಕಿ, ಜ. 16 ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಮಾದರಿ ಕಾರುಗಳ ದರವನ್ನು ಸರಾಸರಿ ಶೇ 1.1 ರಷ್ಟು ಹೆಚ್ಚಿಸಿದೆ.

ಮಾರುತಿ ಸುಜುಕಿ ಡಿಸೆಂಬರ್‌ನಲ್ಲಿ ಬೆಲೆ ಏರಿಕೆ ಕುರಿತು ಮಾಹಿತಿ ನೀಡಿತ್ತು. ‘ಒಟ್ಟಾರೆ ಹಣದುಬ್ಬರ ಮತ್ತು ಇತ್ತೀಚಿನ ನಿಯಂತ್ರಕ ಅಗತ್ಯತೆಗಳಿಂದ ಉತ್ಪಾದನೆ ವೆಚ್ಚ ಹೆಚ್ಚಾಗಿದೆ. ಈ ಒತ್ತಡದಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ. 2023 ರ ಜನವರಿಯಲ್ಲಿ ಈ ಏರಿಕೆ ಮಾಡಲಾಗುವುದು’ ಎಂದು ಕಂಪನಿ ತಿಳಿಸಿತ್ತು.

ಕಳೆದ ವಾರ, ನೋಯ್ಡಾದಲ್ಲಿ ನಡೆದ ಇಂಡಿಯಾ ಆಟೋ ಎಕ್ಸ್‌ಪೋದಲ್ಲಿ, ಮಾರುತಿ ಸುಜುಕಿ ಜಿಮ್ನಿ ಮತ್ತು ಫ್ರಾಂಕ್ಸ್ ಎರಡು ಹೊಸ ಮಾದರಿಗಳನ್ನು ಅನಾವರಣಗೊಳಿಸಿತು.

ADVERTISEMENT

ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನಾರ್ ಕಾರುಗಳನ್ನು ತಯಾರಿಸುವ ಮಾರುತಿ ಸುಜುಕಿ, ಮಾದರಿಯ ಆಧಾರದ ಮೇಲೆ ಬೆಲೆ ಏರಿಕೆ ಭಿನ್ನವಾಗಿರಲಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.