ADVERTISEMENT

ಕಾರು ಖರೀದಿಗೆ ಹಣಕಾಸು ಸೌಲಭ್ಯ: ಡಿಜಿಟಲ್ ವ್ಯವಸ್ಥೆ ಪರಿಚಯಿಸಿದ ಮಾರುತಿ ಸುಜುಕಿ

ಪಿಟಿಐ
Published 9 ಜುಲೈ 2021, 13:25 IST
Last Updated 9 ಜುಲೈ 2021, 13:25 IST
ಮಾರುತಿ ಸುಜುಕಿ ಹೊಸ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಿದೆ.
ಮಾರುತಿ ಸುಜುಕಿ ಹೊಸ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಿದೆ.   

ನವದೆಹಲಿ: ದೇಶದ ಪ್ರಮುಖ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿ ಗ್ರಾಹಕರ ಅನುಕೂಲಕ್ಕಾಗಿ ರಾಷ್ಟ್ರವ್ಯಾಪಿ ಹಣಕಾಸು ಸೌಲಭ್ಯ ಒದಗಿಸಲು ಡಿಜಿಟಲ್ ವ್ಯವಸ್ಥೆ ಪರಿಚಯಿಸಿದೆ.

ಕಾರು ಖರೀದಿಗೆ ಅನುಕೂಲವಾಗುವ ಎಲ್ಲ ರೀತಿಯ ಹಣಕಾಸು ಸೇವೆಗಳನ್ನು ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಒದಗಿಸುತ್ತದೆ.

2020ರ ಡಿಸೆಂಬರ್‌ನಲ್ಲಿ ಮಾರುತಿ ಸುಜುಕಿ ಆಯ್ದ ನಗರಗಳಲ್ಲಿ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿತ್ತು. ಈಗ ದೇಶದೆಲ್ಲೆಡೆ ಡಿಜಿಟಲ್ ಫೈನಾನ್ಸ್ ಸೇವೆ ಒದಗಿಸುತ್ತಿದೆ.

ADVERTISEMENT

ಮಾರುತಿ ಸುಜುಕಿ ಈಗಾಗಲೇ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಿತ 14 ಪ್ರಮುಖ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.

ಡಿಜಿಟಲ್ ಫೈನಾನ್ಸ್ ವ್ಯವಸ್ಥೆ ಮೂಲಕ ಹೊಸ ಕಾರು ಮತ್ತು ಮಾರುತಿ ಟ್ರೂ ವ್ಯಾಲ್ಯೂ ಕಾರು ಖರೀದಿಸುವ ಗ್ರಾಹಕರಿಗೆ ಇದರಿಂದ ಅನುಕೂಲವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.