
ನವದೆಹಲಿ: ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ (ಎಸ್‌ಎವಿಡಬ್ಲ್ಯುಐಪಿಎಲ್) ತನ್ನ ಎರಡು ಉತ್ಪಾದನಾ ಘಟಕಗಳ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಸೌಲಭ್ಯವನ್ನು ಪರಿಚಯಿಸಿದೆ.
‘ಪುಣೆ ಮತ್ತು ಛತ್ರಪತಿ ಸಂಭಾಜಿನಗರದಲ್ಲಿರುವ ಘಟಕಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಮಿಕ ಒಕ್ಕೂಟದೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಕಾರ್ಮಿಕರ ವಿನಂತಿಯನ್ನು ಪರಿಗಣಿಸಿ, ನಿವೃತ್ತಿ ಹೊಂದಲು ಬಯಸುತ್ತಿರುವ ಹಾಗೂ ಉದ್ಯೋಗಾವಕಾಶಗಳ ನಿರೀಕ್ಷೆಯಲ್ಲಿ ಇರುವವರಿಗೆ ಅನುಕೂಲ ಕಲ್ಪಿಸಲು ವಿಆರ್‌ಎಸ್ ಜಾರಿಗೊಳಿಸಲಾಗಿದೆ’ ಎಂದು ಎಸ್‌ಎವಿಡಬ್ಲ್ಯುಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಎರಡೂ ಘಟಕಗಳಲ್ಲಿ ಎರಡು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ, ಆರಂಭದಲ್ಲಿ 100 ಕಾರ್ಮಿಕರು ವಿಆರ್‌ಎಸ್ ಪಡೆಯಲು ಆಸಕ್ತಿ ತೋರಿಸಿದ್ದರು. ಆದರೆ, ಈವರೆಗೆ ಎರಡಂಕಿಯ ಕಾರ್ಮಿಕರು ಮಾತ್ರ ವಿಆರ್‌ಎಸ್ ಪಡೆಯಲು ಮುಂದೆ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.