ಸಾಂಕೇತಿಕ ಚಿತ್ರ
ನವದೆಹಲಿ: ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ರಿಟೇಲ್ ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್ ಮತ್ತು ಮಾರುತಿ ಸುಜುಕಿ ಇಂಡಿಯಾ ಕಂಪನಿ ಪಾಲು ಹೆಚ್ಚಳವಾಗಿದೆ.
ಇದೇ ಅವಧಿಯಲ್ಲಿ ಹುಂಡೈ ಮೋಟರ್ ಇಂಡಿಯಾ ಮತ್ತೊ ಟೊಯೊಟ ಕಿರ್ಲೋಸ್ಕರ್ ಮೋಟರ್‌ನ ಪಾಲು ಕಡಿಮೆಯಾಗಿದೆ ಎಂದು ಪ್ರಯಾಣಿಕ ವಾಹನಗಳ ನೋಂದಣಿ ದತ್ತಾಂಶ ತಿಳಿಸಿದೆ.
ಒಟ್ಟಾರೆ ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟದಲ್ಲಿ ಶೇ 6ರಷ್ಟು ಹೆಚ್ಚಳವಾಗಿ, 2,99,369 ವಾಹನಗಳು ಸೆಪ್ಟೆಂಬರ್‌ನಲ್ಲಿ ಮಾರಾಟವಾಗಿವೆ. ಕಿಯಾ ಇಂಡಿಯಾದ 16,727 ವಾಹನಗಳು ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿ ಶೇ 6.78ರಷ್ಟು ಪಾಲು ಹೊಂದಿದೆ. ದ್ವಿಚಕ್ರ ವಾಹನಗಳ ಮಾರಾಟವು ಶೇ 6.5ರಷ್ಟು ಹೆಚ್ಚಳವಾಗಿ, 12.87 ಲಕ್ಷ ವಾಹನಗಳು ಮಾರಾಟವಾಗಿವೆ.
ಪ್ರಯಾಣಿಕ ವಾಹನ ಕಂಪನಿಗಳ ಮಾರುಕಟ್ಟೆ ಪಾಲು ಕಂಪನಿ;2025ರ ಸೆಪ್ಟೆಂಬರ್; 2024ರ ಸೆಪ್ಟೆಂಬರ್ (ಶೇಕಡವಾರು)
ಮಾರುತಿ ಸುಜುಕಿ ಇಂಡಿಯಾ;41.17;40.83 ಟಾಟಾ ಮೋಟರ್ಸ್;13.75;11.52 ಮಹೀಂದ್ರ ಆ್ಯಂಡ್ ಮಹೀಂದ್ರ;12.58;12.67 ಹುಂಡೈ ಮೋಟರ್ ಇಂಡಿಯಾ;11.96;13.72 ಟೊಯೊಟ ಕಿರ್ಲೋಸ್ಕರ್ ಮೋಟರ್;6.78;7.35 ದ್ವಿಚಕ್ರ ವಾಹನಗಳ ವಿಭಾಗ ಹಿರೋ ಮೋಟೊಕಾರ್ಪ್;25.10;22.48 ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ;25.05;27.7 ಟಿವಿಎಸ್ ಮೋಟರ್;19.11;18.36
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.