ADVERTISEMENT

ಫೋಕ್ಸ್‌ವ್ಯಾಗನ್‌ ಎಸ್‌ಯುವಿ ಟಿಗ್ವಾನ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 19:31 IST
Last Updated 7 ಆಗಸ್ಟ್ 2020, 19:31 IST
ಫೋಕ್ಸ್‌ವ್ಯಾಗನ್‌ ಇಂಡಿಯಾದ ಹೊಸ ಎಸ್‌ಯುವಿ ಟಿಗ್ವಾನ್‌ ಆಲ್‌ಸ್ಪೇಸ್‌
ಫೋಕ್ಸ್‌ವ್ಯಾಗನ್‌ ಇಂಡಿಯಾದ ಹೊಸ ಎಸ್‌ಯುವಿ ಟಿಗ್ವಾನ್‌ ಆಲ್‌ಸ್ಪೇಸ್‌   

ಫೋಕ್ಸ್‌ವ್ಯಾಗನ್‌ ಪ್ಯಾಸೆಂಜರ್‌ ಕಾರ್ಸ್‌ ಇಂಡಿಯಾ ತನ್ನ ಹೊಸ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಟಿ–ರಾಕ್‌ ಮತ್ತು ವಿಶ್ವದಾದ್ಯಂತ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿರುವ 7 ಸೀಟುಗಳ ಎಸ್‌ಯುವಿ ಟಿಗ್ವಾನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಸ್ಟೈಲಿಶ್ ಎಸ್‌ಯುವಿ ಟಿ–ರಾಕ್‌, ಆರು ವಿಭಿನ್ನ ಬಣ್ಣಗಳಲ್ಲಿ ಲಭ್ಯ ಇದೆ. ಎಸ್‌ಯುವಿಯ ಬಣ್ಣಕ್ಕಿಂತ ಚಾವಣಿ ಬಣ್ಣ ವಿಭಿನ್ನವಾಗಿರುವುದರಿಂದ ನೋಡಲು ಅತ್ಯಾಕರ್ಷಕವಾಗಿದೆ. ಇದರಲ್ಲಿ ಅಳವಡಿಸಿರುವ ಇಂಟೆಲಿಜೆಂಟ್‌ ಆ್ಯಕ್ಟಿವ್‌ ಸಿಲಿಂಡರ್‌ (ಎಸಿಟಿ) ತಂತ್ರಜ್ಞಾನವು ವಾಹನದ ಚಾಲನೆಯ ಗತಿ ಆಧರಿಸಿ ಎಂಜಿನ್ನಿನ ನಾಲ್ಕು ಸಿಲಿಂಡರುಗಳ ಪೈಕಿ ಎರಡನ್ನು ಕ್ರಿಯಾಶೀಲ ಅಥವಾ ತಟಸ್ಥಗೊಳಿಸಲಿದೆ. ಇದು ಇಂಧನದ ದಕ್ಷ ಬಳಕೆಗೆ ನೆರವಾಗಲಿದೆ. ಚಾಲಕನ ಚಾಲನಾ ಅನುಭವಕ್ಕೆ ಯಾವುದೇ ಬಗೆಯಲ್ಲಿ ರಾಜಿಯಾಗದ ರೀತಿಯಲ್ಲಿ ಕ್ಷಿಪ್ರಗತಿಯಲ್ಲಿ ಈ ಬದಲಾವಣೆ ನಡೆಯಲಿದೆ. ಅತ್ಯುನ್ನತ ಮಟ್ಟದ ಚಾಲನಾ ಅನುಭವ, ಕಾರ್ಯಕ್ಷಮತೆ ಮತ್ತು ಆರಾಮಕ್ಕೆ ಇದು ಇನ್ನೊಂದು ಹೆಸರಾಗಿದೆ. ನಗರ ಜೀವನಶೈಲಿಗೆ ಸೂಕ್ತವಾಗಿದೆ.ಟಿ–ರಾಕ್‌ನ ಎಕ್ಸ್‌ಶೋರೂಂ ಬೆಲೆ ₹ 19.99 ಲಕ್ಷ ಇದೆ ಎಂದು ಕಂಪನಿ ತಿಳಿಸಿದೆ.

7 ಸೀಟುಗಳ ಎಸ್‌ಯುವಿ ಟಿಗ್ವಾನ್‌ ಆಲ್‌ಸ್ಪೇಸ್‌, ಸುಂದರ ಒಳಾಂಗಣ, ಸುರಕ್ಷತಾ ಸೌಲಭ್ಯ, ಅಸಾಮಾನ್ಯ ಗುಣಮಟ್ಟ ಒಳಗೊಂಡಿದ್ದು ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯ ಇದೆ. 7 ಸ್ಪೀಡ್‌ ಡಿಎಸ್‌ಜಿ 4ಮೋಷನ್‌ ಟ್ರಾನ್ಸಮಿಷನ್‌ನಿಂದಾಗಿ ಇಂಧನ ಕ್ಷಮತೆಯೊಂದಿಗೆ ಆರಾಮದಾಯಕ ಚಾಲನಾ ಅನುಭವವನ್ನೂ ನೀಡಲಿದೆ. ಎಕ್ಸ್‌ಶೋರೂಂ ಬೆಲೆ ₹ 33.12 ಲಕ್ಷ ಇದೆ. ಇವೆರಡೂ ಎಸ್‌ಯುವಿಗಳು ಬಿಎಸ್‌6 ಅಥವಾ ಯುರೊ6 ಮಾನದಂಡದ ಮಾಲಿನ್ಯ ನಿಯಂತ್ರಣ ಗುಣಮಟ್ಟ ಹೊಂದಿವೆ.

ADVERTISEMENT

100 ಕಾರ್‌ ವಿತರಣೆ: ಕಂಪನಿಯು ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ 100 ಕಾರ್‌ಗಳನ್ನು ಗ್ರಾಹಕರಿಗೆ ವಿತರಿಸಿದೆ. ಹೊಸದಾಗಿ ಪರಿಚಯಿಸಿದ ಎಸ್‌ಯುವಿ ಟಿ–ರಾಕ್‌ ಮತ್ತು ಟಿಗ್ವಾನ್‌ ಆಲ್‌ಸ್ಪೇಸ್‌ ಸೇರಿದಂತೆ ಬಿಎಸ್‌6 ಶ್ರೇಣಿಯ ಪೊಲೊ, ವೆಂಟೊಗಳಿಗೆ ರಾಜ್ಯದಲ್ಲಿ ಉತ್ತಮ ಬೇಡಿಕೆ ಇರುವುದನ್ನು ಇದು ಸೂಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.