
ಪ್ರಿಯಾಮಣಿ, ಕಾಜಲ್
ಫ್ಯಾಷನ್ ಜಗತ್ತಿನಲ್ಲಿ ಹೊಸ ಹೊಸ ಟ್ರೆಂಡ್ ಉಡುಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ಕಪ್ಪು ಜಾರ್ಜೆಟ್ ಸ್ಯಾಟಿನ್ ಸೀರೆ ನಟಿ ಹಾಗೂ ಯುವತಿಯರನ್ನು ಸೆಳೆಯುತ್ತಿದೆ. ಇತ್ತೀಚೆಗೆ ನಟಿ ಪ್ರಿಯಾಮಣಿ ಹಾಗೂ ಕಾಜಲ್ ದೇವಗನ್ ಈ ಸೀರೆಯನ್ನು ಧರಿಸಿ ಕ್ಲಿಕ್ಕಿಸಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರಿಂದ ಈ ಸೀರೆಯ ಕಡೆ ಮಹಿಳೆಯರು ಹೆಚ್ಚು ಒಲವು ತೋರುತ್ತಿದ್ದಾರೆ.
ಜಾರ್ಜೆಟ್–ಸ್ಯಾಟಿನ್ ಸೀರೆಯ ವಿಶೇಷತೆ
ಜಾರ್ಜೆಟ್ ಸ್ಯಾಟಿನ್ ಸೀರೆಯು ಪಾರದರ್ಶಕತೆ ಇದ್ದು, ಧರಿಸಲು ಮೃದು ಹಾಗೂ ಹಗುರವಾಗಿರುವುದರಿಂದ ನಟಿಯರು ಹಾಗೂ ಯುವತಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಯಾಟಿನ್ ಮಿಶ್ರಿತ ಸೀರೆಯು ಹೊಳಪು ಹೆಚ್ಚಿಸುತ್ತದೆ. ವಿಶೇಷವಾಗಿ ಕಪ್ಪು ಬಣ್ಣದ ಸಂಯೋಜನೆ, ಎಲ್ಲಾ ಸಂದರ್ಭದ ಕಾರ್ಯಕ್ರಮಗಳಿಗೂ ಸೂಕ್ತವಾದ ಉಡುಗೆಯಾಗಿದೆ.
ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ಸಮಾರಂಭಗಳು ಹಾಗೂ ಫೋಟೋಶೂಟ್‌ಗಳಿಗೆ ಕಪ್ಪು ಬಣ್ಣದ ಉಡುಪುಗಳು ಹೆಚ್ಚಿನ ಹೊಳಪು ನೀಡುತ್ತವೆ.
ಕ್ಯಾಮೆರಾ, ಲೈಟ್‌ನಲ್ಲಿ ಜಾರ್ಜೆಟ್–ಸ್ಯಾಟಿನ್ ಸೀರೆಯು ಇನ್ನಷ್ಟು ಹೊಳೆಯುವುದರಿಂದ ಫೋಟೋಗಳಿಗೆ ವಿಶೇಷ ಮೆರಗು ನೀಡುತ್ತದೆ.
ಸೀರೆಗಳು ಸಿಂಪಲ್ ಆಗಿದ್ದರೂ ಆಕರ್ಷಣಿಯವಾಗಿ ಕಾಣುತ್ತವೆ.
ಜಾರ್ಜೆಟ್ ಸೀರೆಯ ಬೆಲೆ
ಜಾರ್ಜೆಟ್ ಸೀರೆಯು ಮುಖ್ಯವಾಗಿ ದೆಹಲಿ, ಸೂರತ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತಯಾರಿಸಲಾಗುತ್ತದೆ. ಜಾರ್ಜೆಟ್ ಸ್ಯಾಟಿನ್ ಸೀರೆಯ ಬೆಲೆ ₹600ರಿಂದ ₹50 ಸಾವಿರದ ವರೆಗೆ ಲಭ್ಯವಿದೆ. ಅಲಂಕಾರ, ಕಸೂತಿ, ಬಟ್ಟೆಯ ಗುಣಮಟ್ಟ ಮತ್ತು ಬ್ರ್ಯಾಂಡ್ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.