ಪ್ರಸ್ತುತ ಧಗಧಗಿಸುವ ಬೇಸಿಗೆಯು ಎಲ್ಲರನ್ನೂ ಹೈರಾಣವಾಗಿಸಿದೆ. ಹೀಗೆ ಬಸವಳಿಯುತ್ತಿರುವರಿಗೆ ನೈಸರ್ಗಿಕವಾದ ಹೈಡ್ರೆಷನ್ ಎಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಬೇಸಿಗೆಯಲ್ಲಿ ಸೂರ್ಯನು ತನ್ನ ಪ್ರಖರ ಬಿಸಿಲಿನಿಂದ ನಮ್ಮನ್ನು ಕುಗ್ಗುವಂತೆ ಮಾಡಲು ಸಿದ್ಧವಾಗಿರುವುದರಿಂದ ನಮ್ಮನ್ನು ನಾವು ತಂಪಾಗಿ ಮತ್ತು ಶಕ್ತಿಯುತವಾಗಿರಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಆದಾಗ್ಯೂ, ಅನೇಕ ವರ್ಷಗಳಿಂದ ಅದೇ ಹಳೆಯ ನಿಂಬೆ ಪಾನಕ ಮತ್ತು ಗ್ಲೂಕೋಸ್ ಮೇಲೆಯೇ ನಾವು ಅವಲಂಬಿತವಾಗಿದ್ದರೂ ಅವುಗಳ ಮೇಲೆ ನಮಗೆ ಬೇಸರ ಆಗಿಲ್ಲ. ಆದರೆ, ಹಲವರು ಬೇಸಿಗೆಯಲ್ಲಿ ತಮ್ಮ ದೇಹವನ್ನು ತಂಪಾಗಿಡಲು ಅನಾರೋಗ್ಯಕರ ಹಾಗೂ ಮಾರಕ ಕೂಲ್ ಡ್ರಿಂಕ್ಸ್ ಗಳ ದಾಸರಾಗುವುದನ್ನು ನೋಡುತ್ತಿದ್ದೇವೆ. ಚಿಂತಿಸಬೇಡಿ ಇವುಗಳಿಗೆ ಇದೀಗ ವಿದಾಯ ಹೇಳುವ ಸಮಯ ಬಂದಿದೆ.
ಪತಂಜಲಿ ಆಯುರ್ವೇದ ನಿಮಗಾಗಿ ಗುಲಾಬ್ ಶರಬತ್ ಎಂಬ ಆರೋಗ್ಯಕರ, ರುಚಿಕರ ಮತ್ತು ಸದಾ ರಿಫ್ರೆಶ್ ಆಗಿರಿಸುವ ತಂಪು ಪಾನೀಯವನ್ನು ಹೊರ ತಂದಿದೆ- ಈ ಅದ್ಭುತ ಬೇಸಿಗೆ ಪಾನೀಯವು ನಿಮ್ಮ ದೇಹ ಮತ್ತು ಹೃದಯವನ್ನು ಯಾವಾಗಲೂ ಆರೋಗ್ಯಕರವಾಗಿ ಮತ್ತು ಉಲ್ಲಾಸದಿಂದ ಇರಿಸುತ್ತದೆ! ಗುಲಾಬ್ ಶರ್ಬತ್ ಗುಲಾಬಿ ಪರಿಮಳದ ಪಾನೀಯವಾಗಿದೆ. ಇದು ಬರೀ ಉಲ್ಲಾಸವನ್ನಷ್ಟೇ ನೀಡುವುದಿಲ್ಲ. ಅತಿಯಾದ ಸಕ್ಕರೆ ಅಥವಾ ಕೃತಕ ಬಣ್ಣಗಳ ಸೇರ್ಪಡೆಗಳಿಲ್ಲದೇ ಆರೋಗ್ಯದ ಪ್ರಯೋಜನಗಳನ್ನೂ ನೀಡುತ್ತದೆ.
ನಿಮ್ಮ ಬಾಯಿಯಿಂದ ಹೀರುವ ಪತಂಜಲಿಯ ಹೊಸ ಗುಲಾಬ್ ಶರ್ಬತ್ ನ ಪ್ರತಿಯೊಂದು ಗುಟುಕು ಪ್ರಕೃತಿಯಿಂದ ನೇರವಾಗಿ ಬಂದಿದೆ ಎಂದು ತಿಳಿಯಿರಿ. ಗುಲಾಬಿಯ ದಳಗಳ ಹಿತವಾದ ಸಾರವನ್ನು ಅದು ತರುತ್ತದೆ. ಸಾಂಪ್ರದಾಯಿಕ ಆಯುರ್ವೇದ ತತ್ವಗಳು ಮತ್ತು ನೈಸರ್ಗಿಕ ಆರೋಗ್ಯಕ್ಕಾಗಿ ಇರುವ ಪತಂಜಲಿಯ ಬದ್ಧತೆಯೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಪಾನೀಯವು ರುಚಿ ಅಥವಾ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಬಯಸದ ಆರೋಗ್ಯ ಕಾಳಜಿಯುಳ್ಳ ಗ್ರಾಹಕರನ್ನು ಖಂಡಿತವಾಗಿಯೂ ಸೆಳೆಯುತ್ತದೆ.
ನೈಸರ್ಗಿಕ ಆರೋಗ್ಯಕ್ಕೆ ಮರಳಿ!
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ
ಹೆಚ್ಚಿನ ಪಾನೀಯಗಳು ಕಾರ್ಬೊನೇಟೆಡ್‌ನಿಂದ ಕೂಡಿದ ತಂಪು ಪಾನೀಯಗಳಾಗಿವೆ. ಅಷ್ಟೇ ಅಲ್ಲದೇ ಹೆಚ್ಚಿನ ಸಕ್ಕರೆ ಮತ್ತು ಕಡಿಮೆ ಪೋಷಣೆಯ ಕಲಬೆರಕೆಗಳೊಂದಿಗೆ ಸ್ಯಾಚುರೇಟೆಡ್ ಆಗಿರುವಂತ ಪಾನೀಯಗಳು ಮಾರಾಟವಾಗುತ್ತವೆ. ಆದರೆ ಇಂಥ ಸಂದರ್ಭದಲ್ಲಿ ಪತಂಜಲಿ ಗುಲಾಬ್ ಶರ್ಬತ್ ಸಮಯೋಚಿತವಾಗಿದೆ ಗ್ರಾಹಕರ ಎದುರು ಬಂದಿದೆ ಎಂದು ತೋರುತ್ತದೆ. ಇದು ಸಾಂಪ್ರದಾಯಿಕ ಭಾರತೀಯ ರುಚಿಯನ್ನು ನೆನಪಿಸುತ್ತದೆ. ಆರೋಗ್ಯಕರ ಉತ್ಪನ್ನಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಇದು ಪ್ರತಿಬಿಂಬಿಸುತ್ತದೆ.
ಪತಂಜಲಿಯ ಈ ಪಾನೀಯವನ್ನು ಅತ್ಯುತ್ತಮವಾದ ನಿಂಬೆಹಣ್ಣಿನ ರಸದೊಂದಿಗೆ ಬೆರೆಸಲಾಗುತ್ತದೆ. ಅಥವಾ ಇದನ್ನು ನೀವು ಸೇವಿಸುವ ಆರೋಗ್ಯಕಾರಿ ಆಹಾರಗಳಲ್ಲಿ ಗುಲಾಬಿ ಹೂವಿನ ಪರಿಮಳಕ್ಕಾಗಿ ಮತ್ತು ಹೆಚ್ಚಿನ ರುಚಿಗಾಗಿ ಹಾಲು ಅಥವಾ ಸಿಹಿತಿಂಡಿಗಳಲ್ಲಿ ಬೆರೆಸಬಹುದು. ಹೀಗಾಗಿ ಈ ಲಕ್ಷಣಗಳು ಅನೇಕ ಪ್ರತಿಸ್ಪರ್ಧಿಗಳಿಗಿಂತ ಪತಂಜಲಿಯ ಗುಲಾಬ್ ಶರಬತ್ ಅನ್ನು ಭಿನ್ನವಾಗಿ, ಸರಳವಾಗಿ ಕಾಣುವಂತೆ ಮಾಡುತ್ತವೆ. ಪ್ರಾಕೃತಿಕವಾದ ಮತ್ತು ಆಯುರ್ವೇದ ಇಂದು ಗ್ರಾಹಕರಿಗೆ ಪ್ರಮುಖ ಅಂಶವಾಗಿದೆ. ಕೃತಕ ಪಾನೀಯಗಳು ಮತ್ತು ಗ್ರಾಹಕರ ಆರೋಗ್ಯವನ್ನು ಹದಗೆಡಿಸುವ ಪಾನೀಯಗಳ ಇಂದಿನ ಜಗತ್ತಿನಲ್ಲಿ ಪತಂಜಲಿ ಶರಬತ್ ಖಂಡಿತವಾಗಿಯೂ ಆದ್ಯತೆಯ ಆಯ್ಕೆಯಾಗಿದೆ.
ಪರಿಸರ ಸ್ನೇಹಿ ಮತ್ತು ಕೈಗೆಟುಕುವ ದರದಲ್ಲಿ ಸಿಗುತ್ತದೆ ಗುಲಾಬ್ ಶರ್ಬತ್!
ಎಲ್ಲರಿಗೂ ಅರೋಗ್ಯ ಎನ್ನುವ ನಮ್ಮ ಬ್ರ್ಯಾಂಡ್‌ನ ಧ್ಯೇಯಕ್ಕೆ ನಿಷ್ಠರಾಗಿರುವ ಪತಂಜಲಿಯ ರಿಟೇಲ್ ಸ್ಟೋರ್, ಸೂಪರ್‌ಮಾರ್ಕೆಟ್‌ಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಗುಲಾಬ್ ಶರ್ಬತ್ ಕೈಗೆಟುಕುವ ಬೆಲೆಯಲ್ಲಿ ಎಲ್ಲರಿಗೂ ಎಲ್ಲೆಡೆ ಸುಲಭವಾಗಿ ಲಭ್ಯವಿದೆ. ಕಂಪನಿಯು ಪರಿಸರ ಸ್ನೇಹಿ ಪ್ಯಾಕೇಜಿಂಗ್ ಅಭ್ಯಾಸ ಇಲ್ಲಿಯೂ ಪರಿಣಾಮಕಾರಿಯಾಗಿ ಮುಂದುವರೆದಿದೆ. ಅದಕ್ಕಾಗಿ ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. ಈ ಉತ್ಪನ್ನವನ್ನು ಬಿಡುಗಡೆ ಮಾಡುವ ಹಿಂದಿನ ನಮ್ಮ ಆರೋಗ್ಯಕರ ಚಿಂತನೆಯು ಉತ್ತಮ ಭವಿಷ್ಯವನ್ನು ನಿರ್ಮಿಸುವ ನಮ್ಮ ಪ್ರಯತ್ನಗಳನ್ನು ತೋರಿಸುತ್ತದೆ.
‘ಬೇಸಿಗೆಯಲ್ಲಿ ಎಲ್ಲೆಡೆ ಆರೋಗ್ಯ' ಅಭಿಯಾನದ ಭಾಗವಾಗಿ, ಹೈಡ್ರೆಷನ್ ಹೆಚ್ಚಿಸುವ ಗಿಡಮೂಲಿಕೆ ಮತ್ತು ಹಣ್ಣು ಆಧಾರಿತ ಪಾನೀಯಗಳನ್ನು ಪತಂಜಲಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ. ಅಲೋವೆರಾ ಜ್ಯೂಸ್‌ನಿಂದ, ಆಮ್ಲಾ ಬೆಲ್ ಪಾನೀಯಗಳವರೆಗೆ ವ್ಯಾಪಕ ಶ್ರೇಣಿಯಲ್ಲಿ ಕೂಲ್ ಡ್ರಿಂಕ್ಸ್ ಆಯ್ಕೆಗಳು ಲಭ್ಯವಿದೆ. ಆದಾಗ್ಯೂ, ಗುಲಾಬ್ ಶರ್ಬತ್ ತನ್ನ ಸುಮಧುರ ಪರಿಮಳಕ್ಕಾಗಿ ಗ್ರಾಹಕರಲ್ಲಿ ಅಚ್ಚುಮೆಚ್ಚಿನದಾಗಿದೆ ಎನ್ನಬಹುದು.
ಕೊನೆಯದಾಗಿ ಹೇಳಬಯಸುವಂಥದ್ದು
ಉಪವಾಸದ ಸಂದರ್ಭದಲ್ಲಿ ನೀವು ತಂಪು ಪಾನೀಯಗಳ ಮೂಲಕ ನಿಮ್ಮ ಉಪವಾಸವನ್ನು ಅಂತ್ಯಗೊಳಿಸುವುದಕ್ಕಾಗಲಿ, ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸಲು ಪಾನೀಯವನ್ನು ತಯಾರಿಸುವುದಕ್ಕಾಗಲಿ ಅಥವಾ ವಿಶ್ರಾಂತಿಗೆ ಜಾರುವುದಕ್ಕಾಗಲಿ ಆ ವೇಳೆ ಪತಂಜಲಿ ಗುಲಾಬ್ ಶರ್ಬತ್ ಖಂಡಿತವಾಗಿ ನಿಮ್ಮ ಜೊತೆಗಿರಬೇಕಾಗಿದ್ದು. ಸ್ವಾಭಾವಿಕವಾಗಿ ಇದು ಕೇವಲ ಒಂದು ಪಾನೀಯಕ್ಕಿಂತಲೂ ಹೆಚ್ಚಿನದಾಗಿದೆ. ಹೇಳಬೇಕೆಂದರೆ ಇದು ತಾಜಾತನದ ಕೂಡಿರುವ ತಂಪಾದ ಅಮೃತವಾಗಿದೆ.
ಆದ್ದರಿಂದ, ಇನ್ನು ಮುಂದೆ ಬಿಸಿಲ ಧಗೆ ಹೆಚ್ಚಾದಾಗ ಅನಾರೋಗ್ಯಕರ ಸೋಡಾವನ್ನು ಬಿಟ್ಟುಬಿಡಿ. ದೇಹದ ಒಳಗೆ ಮತ್ತು ಹೊರಗೆ ನಿಜವಾಗಿಯೂ ರಿಫ್ರೆಶ್ ಮಾಡುವ ಯಾವುದನ್ನಾದರೂ ತೆಗೆದುಕೊಳ್ಳಿ. ಅದಕ್ಕಾಗಿಯೇ ಪತಂಜಲಿಯ ಗುಲಾಬ್ ಶರ್ಬತ್ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.