ADVERTISEMENT

ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆ ಪತಂಜಲಿಯ ಗುರಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 7:32 IST
Last Updated 22 ಏಪ್ರಿಲ್ 2025, 7:32 IST
<div class="paragraphs"><p>ಆಚಾರ್ಯ ಬಾಲಕೃಷ್ಣ</p></div>

ಆಚಾರ್ಯ ಬಾಲಕೃಷ್ಣ

   

ಭಾರತದ ಮುಂಚೂಣಿಯ ಎಫ್‌ಎಂಸಿಜಿ ಉತ್ಪನ್ನಗಳಲ್ಲಿ ಒಂದಾದ ಪತಂಜಲಿ, ತನ್ನ ಕಾರ್ಯಚಟುವಟಿಕೆಯಲ್ಲಿ ಸುಸ್ಥಿರತೆಯನ್ನು ಮೂಲಾಧಾರವಾಗಿ ಮಾಡಿಕೊಂಡಿದೆ. ಹಸಿರು ಹೆಚ್ಚಿಸುವ ಕಾರ್ಯಾಚರಣೆಯಿಂದ ಹಿಡಿದು, ಪರಿಸರ ಸ್ನೇಹಿ ಅಭ್ಯಾಸಗಳವರೆಗೂ, ಆರೋಗ್ಯಕರ ಭೂಮಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಂಪನಿಯು ಪ್ರಕೃತಿಯನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಲು ಬದ್ಧವಾಗಿದೆ. ಪತಂಜಲಿ ತನ್ನ ಗಮನ ಕೇಂದ್ರೀಕರಿಸಿರುವ ಸುಸ್ಥಿರತೆಯಿಂದ ಪರಿಸರದ ಮೇಲೆ ಆಗಿರುವ ಗಮನಾರ್ಹ ಪರಿಣಾಮಗಳನ್ನು ಅನ್ವೇಷಿಸೋಣ.

ಹಸಿರು ಬೆಳೆಸುವ ಪತಂಜಲಿಯ ಪ್ರಯತ್ನದಲ್ಲಿ ಸುಸ್ಥಿರ ಭವಿಷ್ಯವನ್ನು ಸೃಷ್ಟಿಸುವ ಉದ್ದೇಶವಿದೆ. ಸಾವಯವ ಕೃಷಿ, ಜಲ ಸಂರಕ್ಷಣಾ ಕ್ರಮಗಳು ಮತ್ತು ಅರಣ್ಯ ಹೆಚ್ಚಿಸುವ ಕಾರ್ಯಕ್ರಮಗಳಲ್ಲಿ ಉತ್ಪನ್ನವು ಹೂಡಿಕೆ ಮಾಡಿದೆ. ಈ ಪ್ರಯತ್ನಗಳು ಪರಿಸರ ಸಂರಕ್ಷಿಸುವ ಮತ್ತು ಜೀವವೈವಿದ್ಯತೆ ಬೆಂಬಲಿಸಲು ನೆರವಾಗಿವೆ. ಸಾವಯವ ಕೃಷಿಯನ್ನು ಉತ್ತೇಜಿಸುವ ಮೂಲಕ ಮಣ್ಣು ಆರೋಗ್ಯಕರವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಅದು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದರಿಂದ ಅಂತಿಮವಾಗಿ ನಿಸರ್ಗ ಮತ್ತು ಗ್ರಾಹಕರಿಗೆ ಆಗುವ ಪ್ರಯೋಜನವನ್ನು ಖಾತ್ರಿಪಡಿಸಿಕೊಂಡಿದೆ.

ADVERTISEMENT

ಪತಂಜಲಿಗೆ ಸುಸ್ಥಿರತೆ ಎನ್ನುವುದು ಕಾರ್ಪೊರೇಟ್‌ ಮಂತ್ರವಲ್ಲ, ಬದಲಿಗೆ, ಕಂಪನಿಯ ಆತ್ಮವನ್ನೇ ಆವರಿಸಿಕೊಂಡಿರುವ ತತ್ವ. ಕಚ್ಚಾ ವಸ್ತುಗಳ ಸಂಗ್ರಹದಿಂದ ಹಿಡಿದು, ಉತ್ಪಾದನೆ ಮತ್ತು ವಿತರಣೆಯವರೆಗೂ ವ್ಯವಹಾರದ ಎಲ್ಲಾ ವಿಭಾಗಗಳಲ್ಲೂ ಸುಸ್ಥಿರತೆಯ ಮೇಲೆ ಗಮನ ಹರಿಸಲಾಗುತ್ತಿದೆ. ಪ್ರಕೃತಿಯ ಆರೋಗ್ಯವು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬ ವಾಸ್ತವದ ಆಧಾರದಲ್ಲಿ ಬ್ರಾಂಡ್‌ನ ನಾಯಕತ್ವವು ಸದಾ ಸುಸ್ಥಿರ ಅಭ್ಯಾಸಗಳಿಗೇ ಒತ್ತು ನೀಡಿದೆ. ಭವಿಷ್ಯಕ್ಕಾಗಿ ಉತ್ತಮ ಪರಿಸರ ಪರಂಪರೆಯನ್ನು ಸೃಷ್ಟಿಸುವ ದೀರ್ಘಕಾಲದ ದೃಷ್ಟಿಕೋನವನ್ನು ಪತಂಜಲಿ ಅಳವಡಿಸಿಕೊಂಡಿದೆ.

ಪತಂಜಲಿ ಉತ್ಪನ್ನಗಳ ತಯಾರಿಕೆ ಮತ್ತು ಪೂರೈಕೆ ಸರಪಳಿಯಲ್ಲಿ ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಕೃತಿ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ತನ್ನ ತಯಾರಿಕಾ ಘಟಕದಲ್ಲಿ ಇಂಧನದ ಪರಿಣಾಮಕಾರಿ ಬಳಕೆಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಮರುಬಳಕೆಗೆ ಒತ್ತು ನೀಡಲಾಗುತ್ತಿದೆ. ವ್ಯರ್ಥವಾಗುವುದನ್ನು ಸಾಧ್ಯವಾದಷ್ಟು ತಗ್ಗಿಸಲಾಗಿದೆ. ನೀರಿನ ನಿರ್ವಹಣೆಯಲ್ಲಿ ನೈಸರ್ಗಿಕ ನೀರಿನ ಸಂಪನ್ಮೂಲದ ಅತಿಯಾದ ಬಳಕೆಯನ್ನು ಪತಂಜಲಿ ಘಟಕದಲ್ಲಿ ಕಡಿತಗೊಳಿಸಲಾಗಿದೆ. ಇದು ಭಾರತದ ಹಲವೆಡೆ ವ್ಯಾಪಕವಾಗಿ ಅಳವಡಿಸಿಕೊಂಡ ಕಾಳಜಿಯಾಗಿದೆ.

ಎಫ್‌ಎಂಸಿಜಿಯಲ್ಲಿ ಪ್ಯಾಕೇಜಿಂಗ್ ವಲಯದಲ್ಲಿ ವ್ಯರ್ಥವೆಂಬುದು ಹೆಚ್ಚಾಗಿಯೇ ಆಗುತ್ತದೆ. ಹೀಗಾಗಿ ಪತಂಜಲಿಯ ಘಟಕದಲ್ಲಿ ಪ್ರಕೃತಿಯಲ್ಲಿ ಕಳಿಯುವ ಪ್ಲಾಸ್ಟಿಕ್ ಮತ್ತು ಮರುಬಳಕೆಯ ವಸ್ತುಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಪದಾರ್ಥಗಳನ್ನೇ ಬಳಕೆ ಮಾಡುತ್ತಿದೆ. ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ಹಸಿರಿಗೆ ಪರ್ಯಾಯವನ್ನು ಉತ್ತೇಜಿಸಲಾಗುತ್ತಿದೆ. ಇವೆಲ್ಲದರಿಂದ ಇಡೀ ಉದ್ಯಮಕ್ಕೇ ಪತಂಜಲಿ ಒಂದು ಉತ್ತಮ ಉದಾಹರಣೆಯಾಗಿದೆ. ಹಸಿರು ಪ್ಯಾಕೇಜಿಂಗ್‌ ಪರವಾದ ಈ ಪರಿವರ್ತನೆಯಿಂದ ವ್ಯರ್ಥವಾಗುವುದು ತಗ್ಗಿರುವುದು ಮಾತ್ರವಲ್ಲ, ಬದಲಿಗೆ ಗ್ರಾಹಕರಿಗೂ ಹಸಿರಿನ ಆಯ್ಕೆಗಳ ಅಗತ್ಯಗಳ ಜಾಗೃತಿ ಮೂಡಿಸುತ್ತಿದೆ.

ಸಾವಯವ ಕೃಷಿಗೆ ಬದ್ಧವಾಗಿರುವ ಪತಂಜಲಿಯ ತನ್ನ ಕಾರ್ಯವಿಧಾನದಲ್ಲಿ ಪರಿಸರ ಸಂರಕ್ಷಣೆಯೇ ಪ್ರಮುಖವಾದದ್ದು. ಇದರಲ್ಲಿ ಸಾವಯವ ಉತ್ಪನ್ನಗಳ ಮೇಲೆ ಹೆಚ್ಚಿನ ಒತ್ತು, ಭೂಮಿಯ ಮೇಳೆ ಅತಿಯಾದ ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡಲು ಕಂಪನಿ ಒತ್ತು ನೀಡಿದೆ. ಸಾವಯವ ಕೃಷಿಯು ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ, ಗ್ರಾಹಕರಿಗೆ ಆರೋಗ್ಯಕರ, ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ನೀಡುವುದರ ಜತೆಗೆ ಸಮುದಾಯದ ಆರೋಗ್ಯಕ್ಕೂ ಒತ್ತು ನೀಡುತ್ತಿದೆ. ಈ ಸಾವಯವ ಅಭಿಯಾನವು ಪ್ರತಿಯೊಬ್ಬರಿಗೂ ಮತ್ತು ಭೂಮಿಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪತಂಜಲಿ ಉತ್ತೇಜಿಸುತ್ತದೆ.

ಪತಂಜಲಿಯ ಸುಸ್ಥಿರತೆಯ ಪ್ರಯತ್ನಗಳು ಕಾರ್ಪೊರೇಟ್ ಹೊಣೆಗಾರಿಕೆಯನ್ನು ಮೀರಿದೆ. ಹಸಿರು ಯೋಜನೆಗಳ ಮೂಲಕ ಸುಸ್ಥಿರ ಪ್ಯಾಕೇಜಿಂಗ್ ಮತ್ತು ಸಾವಯವ ಕೃಷಿ ಮೇಲೆ ತನ್ನ ಗಮನ ಕೇಂದ್ರೀಕರಿಸಿದ್ದರಿಂದ ಕಂಪನಿಯು ಎಫ್‌ಎಂಸಿಜಿ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಪತಂಜಲಿ ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸುವುದಲ್ಲದೇ ಮುಂದಿನ ಪೀಳಿಗೆಗೆ ಉತ್ತಮ ಹಚ್ಚಹಸಿರಿನ ನಿಸರ್ಗವನ್ನು ಖಾತ್ರಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.