ADVERTISEMENT

ಪತಂಜಲಿಯ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯದ ಏಳ್ಗೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 6:02 IST
Last Updated 1 ಮೇ 2025, 6:02 IST
   

ನಾವು ಹಿಂದೆ ಹಾಕಿದ ಶ್ರಮ ಇಂದು ನಮ್ಮ ವರ್ತಮಾನವನ್ನು ರೂಪಿಸಿದೆ. ಅದುವೇ ನಮ್ಮ ಭವಿಷ್ಯವನ್ನು ರೂಪಿಸುತ್ತಿದೆ ಹಾಗೂ ಶ್ರೇಷ್ಠತೆಯತ್ತ ಸಾಗಲು ಕಾರಣವಾಗುತ್ತದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನಮ್ಮ ಪರಂಪರೆಯೊಂದಿಗೆ ಸಂಯೋಜಿಸಲ್ಪಟ್ಟಿರುವ ಪತಂಜಲಿಯು ಒಂದು ಬ್ರ್ಯಾಂಡ್ ಆಗಿ ಸಾಮಾಜಿಕ ಜವಾಬ್ದಾರಿಗಳ ವಿಷಯದಲ್ಲಿ, ಸಮುದಾಯದ ಏಳ್ಗೆಗೆ ಯಾವಾಗಲೂ ಮೀಸಲಾಗಿರುತ್ತದೆ.

ಪತಂಜಲಿ ಎಂಬ ಬ್ರ್ಯಾಂಡ್‌ ಹೆಸರು ಇಂದಿನದ್ದಲ್ಲ. ಅದು ನಮ್ಮ ಪ್ರಾಚೀನತೆಯಿಂದಲೇ ಬಂದಿದೆ ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ. ಇದರ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ಆಚಾರ್ಯ ಬಾಲಕೃಷ್ಣ ಅವರೊಂದಿಗೆ 2006 ರಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್  ಸ್ಥಾಪಿಸಿದರು. ಪತಂಜಲಿಯು ಅತ್ಯಂತ ಮುಖ್ಯವಾಗಿ ಭಾರತದ ಗ್ರಾಮೀಣ  ಜನರಿಗೆ ಸಾಧ್ಯವಿರುವ ಪ್ರತಿಯೊಂದು  ಅವಕಾಶವನ್ನು ಒದಗಿಸಿ ಅವರು ಅಭಿವೃದ್ಧಿ ಹೊಂದುವಂತೆ ಮಾಡುವ ಗುರಿಯನ್ನು ಹೊಂದಿದೆ.

ಪತಂಜಲಿಯ ಉದ್ದೇಶವು ವ್ಯವಹಾರ ಮತ್ತು ಲಾಭವನ್ನೂ ಮೀರಿದೆ. ಇದು ಮಾನವ ಸಮಾಜದ ಮೂಲವಾದ ಗ್ರಾಮೀಣ ಪ್ರದೇಶಗಳ ಉನ್ನತಿಯನ್ನು  ಪ್ರೋತ್ಸಾಹಿಸುತ್ತದೆ. ಪತಂಜಲಿ ಕೇವಲ ತನ್ನ ಬ್ರ್ಯಾಂಡ್ ಅಡಿ ತಯಾರಿಸಿದ  ಉತ್ಪನ್ನಗಳ ಪೂರೈಕೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡಿಲ್ಲ. ಪತಂಜಲಿಯ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯದ ಏಳ್ಗೆ ಕುರಿತು ಕೆಲವು ಉಪಕ್ರಮಗಳು ಇಲ್ಲಿವೆ..

ಪತಂಜಲಿಯ ಸಿಎಸ್ಆರ್ ಚಟುವಟಿಕೆಗಳು
ಪತಂಜಲಿಯು ವ್ಯಕ್ತಿ ಮತ್ತು ಸಮುದಾಯದ ಸುಸ್ಥಿರ ಹಾಗೂ ಸರ್ವಾಂಗೀಣ ಅಭಿವೃದ್ಧಿ ಮೇಲೆ ನಂಬಿಕೆ ಇಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುವುದು ಮತ್ತು ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು ಪತಂಜಲಿಯ ಉದ್ದೇಶವಾಗಿದೆ. ಇದಕ್ಕಾಗಿ ಪತಂಜಲಿ ಯೋಗಪೀಠದಲ್ಲಿ ಉಚಿತ ಯೋಗ ತರಗತಿಗಳು ನಿರಂತರವಾಗಿ ನಡೆಯುತ್ತವೆ.

ಬಾಬಾ ರಾಮದೇವ್ ಅವರ ನೇತೃತ್ವದ ವೈದ್ಯರ ತಂಡವು ಉಚಿತ ಆಯುರ್ವೇದ ಸಲಹೆ, ಸಮಾಲೋಚನೆಗಳನ್ನು ಒಳಗೊಂಡ ಶಿಬಿರಗಳನ್ನು ನಿಯಮಿತವಾಗಿ ನಡೆಸುತ್ತದೆ. ಇವು ವಸತಿ ಮತ್ತು ವಸತಿ ರಹಿತ ಶಿಬಿರಗಳಾಗಿರುತ್ತವೆ.
ದೂರದ ಪ್ರದೇಶಗಳಲ್ಲಿ, ರಿಮೋಟ್ ಏರಿಯಾಗಳಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಸಮಾಲೋಚನೆಗಳನ್ನು, ಶಿಬಿರಗಳನ್ನು ನಡೆಸಲಾಗುತ್ತದೆ.

ಪತಂಜಲಿಯ ಶಿಕ್ಷಣ ಕಾರ್ಯಕ್ರಮಗಳು

ಶಿಕ್ಷಣವು ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳ ಮಿಶ್ರಣವಾಗಿದೆ. ಈ ಆಲೋಚನೆಗಳೇ ಪತಂಜಲಿ ವಿಶ್ವವಿದ್ಯಾಲಯದ ಮೂಲಾಧಾರವಾಗಿವೆ.

ADVERTISEMENT

ಉತ್ತರಾಖಂಡದ ಪತಂಜಲಿ ವಿಶ್ವವಿದ್ಯಾಲಯವು 10 ವಿಭಾಗಗಳು, 33 ಪ್ರೊಗ್ರಾಂಗಳು  679 ಕೋರ್ಸ್‌ಗಳನ್ನು ಒಳಗೊಂಡಿದೆ.

ಎಲ್ಲಾ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಪತಂಜಲಿ ವಿಶ್ವವಿದ್ಯಾಲಯ ಸಮರ್ಪಿತವಾಗಿದೆ.

ಪತಂಜಲಿ ವಿಶ್ವವಿದ್ಯಾಲಯದ ಪಠ್ಯಕ್ರಮವು ಸಂಪೂರ್ಣವಾಗಿ ಯೋಗಾಭ್ಯಾಸ, ಜೀವನ ಕೌಶಲ್ಯಗಳು ಮತ್ತು ಭಾರತದ ವೈದಿಕ ಸಂಪ್ರದಾಯಗಳನ್ನು ಅವಲಂಬಿಸಿರುತ್ತದೆ.

ಪದವಿ ಪೂರ್ವ, ಡಿಪ್ಲೊಮಾ, ಸ್ನಾತಕ, ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ಡಿ. ಲಿಟ್ ಕೋರ್ಸ್‌ಗಳು ಉತ್ತರಾಖಂಡದ ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದಲ್ಲಿ ಲಭ್ಯವಿವೆ.

‘ಸ್ವದೇಶಿ’ ಪ್ರಚಾರ

‘ಸ್ವದೇಶಿ’ ಎಂಬ ಪದವೇ ಏಕತೆಯನ್ನು ಸೂಚಿಸುತ್ತದೆ. ಇದು ನಮ್ಮ ಶ್ರೇಷ್ಠ ಐತಿಹಾಸಿಕ ಆಚರಣೆಗಳ ಮೇಲೆ ಅದ್ಭುತ ಬೆಳಕು ಹರಿಸುತ್ತದೆ.

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವಲ್ಲಿ ಸ್ವದೇಶಿ ಮಂತ್ರ ಪಠಿಸುವುದೇ ಪತಂಜಲಿಯ ಕಾರ್ಯಸೂಚಿಯಾಗಿದೆ.

ಸ್ವದೇಶಿ ಹೆಗ್ಗುರುತುಗಳಾದ ಆಯುರ್ವೇದ, ಯೋಗ, ಗಿಡಮೂಲಿಕೆಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಆಧರಿಸಿದ ಉತ್ಪನ್ನಗಳ ಬಳಕೆಯನ್ನು ಪತಂಜಲಿ ಪ್ರೋತ್ಸಾಹಿಸುತ್ತದೆ.

ಸ್ವದೇಶಿ’ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪತಂಜಲಿ ಕೊಡುಗೆ ನೀಡುತ್ತದೆ.

ಸ್ವದೇಶಿ ಸಮೃದ್ಧಿ ಕಾರ್ಡ್ ಯೋಜನೆ ಮೂಲಕ ಸದಸ್ಯರಿಗೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.