ADVERTISEMENT

ಅನುದಾನ ಕೊರತೆ ಕೈಗೂಡದ ‘ಭಾರತ್‌ನೆಟ್’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 20:15 IST
Last Updated 1 ಫೆಬ್ರುವರಿ 2020, 20:15 IST
   
""

ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವ ತನ್ನ ಮಹತ್ವಾಕಾಂಕ್ಷಿ ಯೋಜನೆ ‘ಭಾರತ್‌ನೆಟ್‌’ಗೆ ಕೇಂದ್ರ ಸರ್ಕಾರವು, ನೂತನ ಬಜೆಟ್‌ನಲ್ಲಿ ಕಡಿಮೆ ಅನುದಾನವನ್ನು ಮೀಸಲಿರಿಸಿದೆ. ಎರಡು ಹಂತಗಳಲ್ಲಿ ದೇಶದ ಎಲ್ಲಾ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಬೇಕಿದೆ. ಈ ಯೋಜನೆಯು ಪೂರ್ಣಗೊಳ್ಳಬೇಕಾದ ಅಂತಿಮ ದಿನಾಂಕವನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.

ಸರ್ಕಾರವು ಈ ಹಿಂದಿನ ಬಜೆಟ್‌ನಲ್ಲಿ ಮೀಸಲಿರಿಸಿದ ಅನುದಾನದಲ್ಲಿ ಶೇ 50ಕ್ಕಿಂತಲೂ ಕಡಿಮೆ ಮೊತ್ತವನ್ನು ನೀಡಿದೆ. ಪರಿಷ್ಕೃತ ಅಂದಾಜಿನಲ್ಲೂ ಅನುದಾನವನ್ನು ಕಡಿತ ಮಾಡಿದೆ. ಈ ಸಾಲಿನಲ್ಲಿಯೂ ಅನುದಾನವನ್ನು ಕಡಿಮೆ ಮಾಡಿದೆ.

2.5 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆದು, ವೈಫೈ ಸೌಲಭ್ಯ ಪಡೆಯುತ್ತಿರುವ ಗ್ರಾಮ ಪಂಚಾಯಿತಿಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ. ಅನುದಾನ ಕಡಿಮೆ ಆಗಿರುವುದೇ ಯೋಜನೆಯ ಕುಂಟಿತ ಪ್ರಗತಿಗೆ ಕಾರಣವಾಗಿದೆ.

ADVERTISEMENT

₹ 4,788 ಕೋಟಿ:2018–19ನೇ ಸಾಲಿನಲ್ಲಿ ನೀಡಲಾಗಿರುವ ಅನುದಾನ

₹ 8,350 ಕೋಟಿ:2019–20ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನ

₹ 3,000 ಕೋಟಿ:2019–20ನೇ ಸಾಲಿನ ಬಜೆಟ್‌ನ ಪರಿಷ್ಕೃತ ಅಂದಾಜಿನಲ್ಲಿ ಮೀಸಲಿರಿಸಲಾದ ಅನುದಾನ ಮೊತ್ತ

₹ 6,000 ಕೋಟಿ:2020–21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿರುವ ಅನುದಾನ

-1.46 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್‌ ಕೇಬಲ್ (ಒಎಫ್‌ಸಿ) ಅಳವಡಿಸಲಾಗಿದೆ

-1.34 ಲಕ್ಷಗ್ರಾಮ ಪಂಚಾಯಿತಿಗಳಿಗೆ ಒಎಫ್‌ಸಿ ಮತ್ತು ಸಂಬಂಧಿತ ಉಪಕರಣಗಳನ್ನು ಅಳವಡಿಸಲಾಗಿದೆ

-45,769 ಗ್ರಾಮ ಪಂಚಾಯಿತಿಗಳಲ್ಲಿ ವೈಫೈ ರೋಟರ್‌ ಅನ್ನು ಅಳವಡಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.