ADVERTISEMENT

Budget | PM Dhan Dhyan Krishi Yojana: 1.7 ಕೋಟಿ ಕೃಷಿಕರಿಗೆ ಪ್ರಯೋಜನ

ಪಿಟಿಐ
Published 1 ಫೆಬ್ರುವರಿ 2025, 6:12 IST
Last Updated 1 ಫೆಬ್ರುವರಿ 2025, 6:12 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

(ಪಿಟಿಐ ಚಿತ್ರ)

ನವದೆಹಲಿ: ಸಂಸತ್ತಿನಲ್ಲಿ ಇಂದು (ಶನಿವಾರ) 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 'ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ' ಅನ್ನು ಘೋಷಿಸಿದ್ದಾರೆ.

ADVERTISEMENT

ಈ ಯೋಜನೆ ಮೂಲಕ 1.7 ಕೋಟಿ ಕೃಷಿಕರಿಗೆ ಪ್ರಯೋಜನವಾಗಲಿದೆ. ಕಡಿಮೆ ಇಳುವರಿಯ 100 ಜಿಲ್ಲೆಗಳು ಇದರಲ್ಲಿ ಒಳಗೊಂಡಿರಲಿವೆ ಎಂದು ಅವರು ತಿಳಿಸಿದ್ದಾರೆ.

ದಾಖಲೆಯ ಸತತ 8ನೇ ಬಜೆಟ್ ಮಂಡಿಸಿರುವ ನಿರ್ಮಲಾ, ಕೃಷಿ ಕ್ಷೇತ್ರದ ಆಧುನೀಕರಣ ಹಾಗೂ ಸ್ವಾವಲಂಬನೆಯತ್ತ ಗಮನ ಕೇಂದ್ರಿಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಯುವಜನತೆ, ಮಹಿಳೆ ಮತ್ತು ರೈತರನ್ನು ಕೇಂದ್ರೀಕರಿಸುವ ಗ್ರಾಮೀಣ ಸಮೃದ್ಧಿ ಯೋಜನೆಯನ್ನು ಸರ್ಕಾರ ಆರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ.

ದ್ವಿದಳ ಧಾನ್ಯಗಳ ಆತ್ಮ ನಿರ್ಭರ ಭಾರತಕ್ಕಾಗಿ ಆರು ವರ್ಷಗಳ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ತರಕಾರಿ, ಹಣ್ಣುಗಳ ಉತ್ಪಾದನೆ ಮತ್ತು ಲಾಭದಾಯಕ ಬೆಲೆ ಒದಗಿಸುವ ಸಮಗ್ರ ಕಾರ್ಯಕ್ರಮವನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.