ADVERTISEMENT

Budget 2025 | 'ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಬಜೆಟ್: ನಿರ್ಮಲಾ ಸೀತಾರಾಮನ್

ಪಿಟಿಐ
Published 2 ಫೆಬ್ರುವರಿ 2025, 8:55 IST
Last Updated 2 ಫೆಬ್ರುವರಿ 2025, 8:55 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

(ಪಿಟಿಐ ಚಿತ್ರ)

ನವದೆಹಲಿ: ‘2025–26ರ ಆರ್ಥಿಕ ವರ್ಷದ ಬಜೆಟ್‌ ಅನ್ನು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಬಜೆಟ್‌’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಣ್ಣಿಸಿದ್ದಾರೆ.

ADVERTISEMENT

‘ಪ್ರಾಮಾಣಿಕ ತೆರಿಗೆದಾರರಾಗಿದ್ದರೂ ತಮ್ಮ ಆಕಾಂಕ್ಷೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ದೂರುತ್ತಿದ್ದ ಮಧ್ಯಮ ವರ್ಗದವರ ಧ್ವನಿಯನ್ನು ನಾವು ಕೇಳಿದ್ದೇವೆ. ಈ ವರ್ಗದ ಜನರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆರಿಗೆ ಕಡಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಹೇಳಿದರು.

ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಮಾತಿನಲ್ಲಿ ಪ್ರಜಾಪ್ರಭುತ್ವದ ವ್ಯಾಖ್ಯಾನದಂತೆ, ಇದು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಬಜೆಟ್ ಆಗಿದೆ ಎಂದು ಸಚಿವರು ಹೇಳಿದರು.

ತೆರಿಗೆಯ ಹೊಸ ದರಗಳು ಮಧ್ಯಮ ವರ್ಗದ ಜನರ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತವೆ. ಜೊತೆಗೆ ಅವರಲ್ಲಿ ಹಣದ ಹರಿವನ್ನು ಹೆಚ್ಚಿಸುತ್ತದೆ. ಇದು ಗೃಹಬಳಕೆಗೆ ಉತ್ತೇಜನ ನೀಡಲಿದ್ದು, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಳ ಮಾಡಲಿದೆ ಎಂದು ಹೇಳಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2025–26ರ ಆರ್ಥಿಕ ವರ್ಷದ ಬಜೆಟ್‌ ಅನ್ನು ಸಂಸತ್ತಿನಲ್ಲಿ ಫೆಬ್ರುವರಿ 1ರಂದು ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.