ADVERTISEMENT

Union Budget; ತೆರಿಗೆ ಸಲ್ಲಿಕೆ ವಿಳಂಬಕ್ಕೆ ಶಿಕ್ಷೆ ಇಲ್ಲ, ಶೇ10 ದಂಡ ಮಾತ್ರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:28 IST
Last Updated 1 ಫೆಬ್ರುವರಿ 2026, 6:28 IST
   

ನವದೆಹಲಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದಾರೆ.

ಬಜೆಟ್ ಮುಖ್ಯಾಂಶಗಳು

* ಶೇ 4.3 ರಷ್ಟು ವಿತ್ತೀಯ ಕೊರತೆ

* ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿ

ADVERTISEMENT

* ಆದಾಯ ತೆರಿಗೆ ಸಲ್ಲಿಕೆ ವಿಳಂಬಕ್ಕೆ ಶೇ 10ರಷ್ಟು ದಂಡ, ಶಿಕ್ಷೆ ಇಲ್ಲ.

* ವಿದೇಶ ಯಾತ್ರೆ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ ಟಿಡಿಎಸ್ ಮೊತ್ತ ಶೇ 2ಕ್ಕೆ ಇಳಿಕೆ. ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್‌ ಕಡಿತ

* ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ. ಮಾ.31ರ ತನಕ ಪರಿಷ್ಕೃತ ತೆರಿಗೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ

* ಮೋಟಾರು ಅಪಘಾತ ಕ್ಲೇಮುಗಳಿಗೆ ತೆರಿಗೆ ವಿನಾಯಿತಿ

* ಬಂಡವಾಳ ವೆಚ್ಚ 12.2 ಲಕ್ಷ ಕೋಟಿ

* ಬೆಂಗಳೂರು ಸೇರಿದಂತೆ ಏಳು ಹೈ ಸ್ಪೀಡ್‌ ರೈಲು ಯೋಜನೆ ಘೋಷಣೆ

* 2ನೇ ಮತ್ತು 3ನೇ ಹಂತದ ನಗರಗಳಿಗಳಿಗಾಗಿ ಎಂಎಸ್‌ಎಂಇಗಳಿಗಾಗಿ ಕಾರ್ಪೊರೇಟ್ ಮಿತ್ರ ಯೋಜನೆ ಘೋಷಣೆ

* ಕ್ಯಾನ್ಸರ್ ಸಂಬಂಧಿತ 17 ಔಷಧಿಗಳು, 7 ಅಪರೂಪದ ಕಾಯಿಲೆಗಳಿಗೆ ಸಂಬಮಧಿಸಿದ 7 ಔಷಧಿಗಳ ಮೇಲೆ ತೆರಿಗೆ ವಿನಾಯಿತಿ.

* ತಮಿಳುನಾಡು, ಕೇರಳ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಅಪೂರ್ವ ಖನಿಜಗಳ ಕಾರಿಡಾರ್ ಘೋಷಣೆ

* ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ಖಾದಿ ಕೈಮಗ್ಗಗಳಿಗೆ ಉತ್ತೇಜನ.

* ರಿಫಾರ್ಮ್‌ ಎಕ್ಸ್‌ಪ್ರೆಸ್ ಘೋಷಣೆ: ಉದ್ಯೋಗ ಸೃಷ್ಟಿ, ಉತ್ಪಾದನೆಗೆ ಉತ್ತೇಜನ, ಬೆಳವಣೊಗೆಗ ಉತ್ತೇಜನ

* ಮೀಸಲು ವ್ಯಾಪಾರ ಕಾರಿಡಾರ್‌ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲಾಗುವುದು. ಹಡಗು ದುರಸ್ತಿ ಕೇಂದ್ರಗಳನ್ನು ವಾರಣಾಸಿ ಮತ್ತು ಪಟ್ನಾದಲ್ಲಿ ಸ್ಥಾಪಿಸುವ ಉದ್ದೇಶ. ಜತೆಗೆ ಕರಾವಳಿ ಕಾರ್ಗೊ ಉತ್ತೇಜನ ಯೋಜನೆಯನ್ನು ಒಳನಾಡು ಜಲಮಾರ್ಗ ಮತ್ತು ಕರಾವಳಿಯಲ್ಲೂ ಜಾರಿಗೆ ತರಲಾಗುವುದು.

* ಸೆಮಿ ಕಂಡಕ್ಟರ್‌ ವಲಯಕ್ಕಾಗಿ ₹40,000 ಕೋಟಿ ಮೀಸಲು

* ಸೇವಾ ವಲಯದಲ್ಲಿ ಎಐ ಪರಿಣಾಮ ಅಧ್ಯಯನಕ್ಕೆ ಉನ್ನತ ಮಟ್ಟದ ಸ್ಥಾಯಿ ಸಮಿತಿ ಘೋಷಣೆ: ಶೈಕ್ಷಣಿಕ್, ಔದ್ಯೋಗಿಕ ಮತ್ತು ಉದ್ಯಮದಲ್ಲಿ ಪರಿಣಾಮ ಕುರಿತ ಅಧ್ಯಯನ, ಈ ವಲಯಗಳು ಜಾಗತಿಕವಾಗಿ ಶೇ 10ರಷ್ಟು ಷೇರಿನೊಂದಿಗೆ ಜಾಗತಿಕವಾಗಿ ನಾಯಕತ್ವ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.

* ಅನಿವಾಸಿ ಭಾರತೀಯರು ಪೋರ್ಟ್‌ ಪೋಲಿಯೊ ಹೂಡಿಕೆ ಯೋಜನೆಯಡಿ ಭಾರತದ ಷೇರುಗಳಲ್ಲಿ ಹೂಡಿಕೆಗೆ ಅವಕಾಶ

* ಕರ್ನಾಟಕ ಮತ್ತು ಕೇರಳವನ್ನು ಒಳಗೊಂಡು ಕರಾವಳಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ತೆಂಗು, ಗಂಧ, ಗೇರು ಬೆಳೆಗೆ ಉತ್ತೇಜನ

*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.