ADVERTISEMENT

ಕೇಂದ್ರ ಬಜೆಟ್: ರೈಲ್ವೆ ಸಂಬಂಧಿತ ಷೇರುಗಳ ಬೆಲೆಯಲ್ಲಿ ಹೆಚ್ಚಳ

ಪಿಟಿಐ
Published 1 ಫೆಬ್ರುವರಿ 2024, 5:55 IST
Last Updated 1 ಫೆಬ್ರುವರಿ 2024, 5:55 IST
<div class="paragraphs"><p>ಷೇರು ಪೇಟೆ ಸೂಚ್ಯಂಕ </p></div>

ಷೇರು ಪೇಟೆ ಸೂಚ್ಯಂಕ

   

ನವದೆಹಲಿ: ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ರೈಲ್ವೆ ಸಂಬಂಧಿತ ಕಂಪನಿಗಳ ಷೇರು ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿದೆ.

IRCON ಇಂಟರ್‌ನ್ಯಾಷನಲ್ ಷೇರುಗಳು ಶೇ 3.26,ಟೆಕ್ಸ್‌ಮಾಕೊ ರೈಲ್ ಮತ್ತು ಎಂಜಿನಿಯರಿಂಗ ಷೇರುಗಳ ಮೌಲ್ಯ ಶೇ 2.71, ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶನ್ ಷೇರುಗಳು ಮೌಲ್ಯ ಶೇ 2.58 ರಷ್ಟು, ರೈಲ್ ವಿಕಾಸ್ ನಿಗಮದ ಷೇರುಗಳ ಮೌಲ್ಯವು ಶೇ 1.52ರಷ್ಟು ಹೆಚ್ಚಳ ಕಂಡಿವೆ.

ADVERTISEMENT

ಜುಪಿಟರ್ ವಾಗನ್ ಷೇರು ಬೆಲೆ ಶೇ 1.46ರಷ್ಟು, ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಷೇರು ಬೆಲೆ 0.88ರಷ್ಟು ಏರಿಕೆ ಕಂಡಿದೆ.

30 ಷೇರಯಗಳ ಬಿಎಸ್‌ಇ ಸೆನ್ಸೆಕ್ಸ್ 118.59 ಅಂಶಗಳಷ್ಟು ಏರಿಕೆ ಕಂಡು 71,870ರಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 68.20 ಅಂಶಗಳ ಏರಿಕೆಯೊಂದಿಗೆ 21,789ರಲ್ಲಿ ವಹಿವಾಟು ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.