ADVERTISEMENT

Budget 2026| ಸ್ಥಿರಾಸ್ತಿ ಖರೀದಿ: TAN ಸಂಖ್ಯೆ ಅಗತ್ಯವಿಲ್ಲ ಎಂದ ಕೇಂದ್ರ ಸರ್ಕಾರ

ಪಿಟಿಐ
Published 1 ಫೆಬ್ರುವರಿ 2026, 15:55 IST
Last Updated 1 ಫೆಬ್ರುವರಿ 2026, 15:55 IST
<div class="paragraphs"><p>ಸಂಸತ್‌ನಲ್ಲಿ  ನಿರ್ಮಲಾ ಸೀತಾರಾಮನ್&nbsp;ಬಜೆಟ್ ಭಾಷಣ</p></div>

ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ

   

– ಪಿಟಿಐ ಚಿತ್ರ

ನವದೆಹಲಿ: ಅನಿವಾಸಿ ಭಾರತೀಯರಿಂದ ಸ್ಥಿರಾಸ್ತಿ ಖರೀದಿಸುವ ವ್ಯಕ್ತಿಗಳು ಇನ್ನು ಮುಂದೆ ತೆರಿಗೆ ಕಡಿತಕ್ಕಾಗಿ ‘ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ’ (ಟಿಎಎನ್‌) ವಿವರಗಳನ್ನು ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ.

ADVERTISEMENT

ಈ ಮೊದಲು ಅನಿವಾಸಿ ಭಾರತೀಯರಿಂದ ಆಸ್ತಿ ಖರೀದಿಸುವಾಗ ಟಿಎಎನ್‌ ಸಂಖ್ಯೆ ನೀಡಬೇಕಿತ್ತು. ಆದರೆ, ಈಗ ಪ್ಯಾನ್‌ ಕಾರ್ಡ್‌ ಮೂಲಕವೇ ಈ ಪ್ರಕ್ರಿಯೆ ಮುಗಿಸಬಹುದು. ಇದು ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ.

ಸಾಮಾನ್ಯ ಜನರಿಗೆ ತೆರಿಗೆ ನಿಯಮಗಳ ಸಂಕೀರ್ಣತೆಯನ್ನು ಕಡಿಮೆ ಮಾಡಲು ಮತ್ತು ಆಸ್ತಿ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಬದಲಾವಣೆಯು ಕೇವಲ ಅನಿವಾಸಿಗಳಿಂದ ಆಸ್ತಿ ಖರೀದಿಸುವ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. 

ಟಿಎಎನ್‌ ಅನ್ನು ಕಾರ್ಪೊರೇಟ್‌ ಸಂಸ್ಥೆಗಳಿಗೆ ನೀಡಲಾಗುತ್ತದೆ. ಪ್ಯಾನ್‌ ಸಂಖ್ಯೆಯನ್ನು ವ್ಯಕ್ತಿಗಳಿಗೆ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.