ADVERTISEMENT

ಕ್ಷಯ ನಿರ್ಮೂಲನೆಗೆ ಕ್ರಮ, ಜಿಲ್ಲೆಗೆ ಮೆಡಿಕಲ್ ಕಾಲೇಜು, ಶಿಕ್ಷಣಕ್ಕೆ ಹೆಚ್ಚಿನ ಹಣ

ಏಜೆನ್ಸೀಸ್
Published 1 ಫೆಬ್ರುವರಿ 2020, 9:14 IST
Last Updated 1 ಫೆಬ್ರುವರಿ 2020, 9:14 IST
   

ನವದೆಹಲಿ: ದೇಶದಲ್ಲಿ ಜನರ ಆರೋಗ್ಯಕ್ಕಾಗಿ ಹೊಸಯೋಜನೆಗಳನ್ನು 2020ರ ಬಜೆಟ್‌‌ನಲ್ಲಿಪ್ರಕಟಿಸಲಾಗಿದ್ದು, ಕ್ಷಯರೋಗ ನಿರ್ಮೂಲನೆಗಾಗಿ 'ಟಿಬಿಹಾರೇಗಾ ದೇಶ ಜೀತೇಗಾ' ಘೋಷಣೆಯೊಂದಿಗೆ ನೂತನ ಕಾರ್ಯಕ್ರಮರೂಪಿಸಲಾಗಿದೆ.

ಕ್ಷಯರೋಗ ಹೋದರೆ ದೇಶ ಬಲಿಷ್ಠವಾಗುತ್ತೆ ಎಂಬ ಘೋಷಣೆಯೊಂದಿಗೆ ದೇಶದಲ್ಲಿಕ್ಷಯ ರೋಗ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ವಿಶೇಷ ಯೋಜನೆ. 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಪಣ. 2024ರ ಹೊತ್ತಿಗೆ ದೇಶದ ಎಲ್ಲ ಜಿಲ್ಲೆಗಳಿಗೆ ಜನ ಆರೋಗ್ಯ ಯೋಜನೆ ವಿಸ್ತರಣೆ.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ತಾಲ್ಲೂಕು ಮತ್ತು ಹೋಬಳಿ ಹಂತದ ಅಸ್ಪತ್ರೆಗಳಿಗೂ ಸೌಲಭ್ಯ ಒದಗಿಸಲು ಚಿಂತನೆ. ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು.

ADVERTISEMENT

ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆಯ ವಿಸ್ತರಣೆ.ವೈದ್ಯಕೀಯ ಸಲಕರಣೆಗಳಿಂದ ಸಂಗ್ರಹಿಸುವ ತೆರಿಗೆಯನ್ನು ಗುರುತಿಸಲಾದ 112 ಜಿಲ್ಲೆಗಳಲ್ಲಿ ಆರೋಗ್ಯ ಸುಧಾರಿಸಲು ಬಳಸಲಾಗುವುದು. ಸ್ವಚ್ಛತೆಗೆ ಒತ್ತು. ಸ್ವಚ್ಛ ಭಾರತಕ್ಕೆ 12,300 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಘೋಷಣೆ. 3.60 ಲಕ್ಷ ಕೋಟಿ ಘೋಷಣೆ.

ಶಿಕ್ಷಣ ಮತ್ತು ಕೌಶಲ: 2030ರ ವೇಳೆಗೆಜಗತ್ತಿನ ಅತಿಹೆಚ್ಚು ಉದ್ಯೋಗಕ್ಕೆ ಸಿದ್ಧರಿರುವ ಜನರು ನಮ್ಮ ದೇಶದಲ್ಲಿ ಇರುತ್ತಾರೆ. ಹೊಸ ಶಿಕ್ಷಣ ನೀತಿಗೆ 2 ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಶೀಘ್ರ ಹೊಸ ಶಿಕ್ಷಣ ನೀತಿ ಘೋಷಿಸುವುದಾಗಿ ಬಜೆಟ್ ನಲ್ಲಿ ಹೇಳಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ 112 ಜಿಲ್ಲೆಗಳಿಗೆ ವಿಶೇಷ ಆರೋಗ್ಯ ಯೋಜನೆ.ಆರೋಗ್ಯ ಕ್ಷೇತ್ರಕ್ಕೆ 2000 ಮೆಡಿಶನ್ 2024 ವರೆಗೆ ಗುರಿ ಸಾಧಿಸುವ ಯೋಜನೆ. ಆರೋಗ್ಯಕ್ಕಾಗಿ ₹69,000 ಕೋಟಿ ಮೀಸಲು.

ನೂತನ ಶಿಕ್ಷಣ ನೀತಿ ಸದ್ಯದಲ್ಲೇ

ಶಿಕ್ಷಣಕ್ಕೆ ಈ ಬಾರಿ ₹99,300 ಕೋಟಿ ಮೀಸಲಿರಿಸಲಾಗಿದ್ದು, ₹300 ಕೋಟಿಯನ್ನು ಕೌಶಲಾಭಿವೃದ್ಧಿಗಾಗಿ (ಸ್ಕಿಲ್ ಡೆವಲಪ್ಮೆಂಟ್) ಮೀಸಲಿರಿಸಲಾಗಿದೆ.ಸದ್ಯದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಪ್ರಕಟಿಸಲಾಗುವುದು. ಪರಿಣತಿಹೊಂದಿರುವ ಶಿಕ್ಷಕರನ್ನು ಗುರುತಿಸಲು ಕ್ರಮ. ವಿಜ್ಞಾನ ಮತ್ತುತಂತ್ರಜ್ಞಾನ ವಿಷಯದಲ್ಲಿ ಹೆಚ್ಚು ಒತ್ತು ನೀಡಲಾಗಿದೆ.ಇದಕ್ಕಾಗಿ 150 ಶಿಕ್ಷಣ ಸಂಸ್ಥೆಗಳ ಗುರುತಿಸಲಾಗಿದೆ.ಶಿಕ್ಷಣ ಕ್ಷೇತ್ರದಲ್ಲೂ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮ. ವಿದ್ಯಾರ್ಥಿಗಳುಇಂಟರ್ನ್ಶಿಪ್ ಪಡೆಯಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಆ ಮೂಲಕ ಉತ್ತಮ ಶಿಕ್ಷಣ ನೀಡಲು ಕ್ರಮ.

ಪದವಿ ಶಿಕ್ಷಣದಲ್ಲಿ ಆನ್ ಲೈನ್ ಪದ್ದತಿ ಜಾರಿ ಮಾಡಲು ಯೋಜನೆ. ಆಯ್ದ ಸಂಸ್ಥೆಗಳನ್ನು ಯೋಜನೆಯಲ್ಲಿ ಅಳವಡಿಸಲಾಗುವುದು. ಈ ಸಂಬಂಧ ಮಾತುಕತೆ ನಡೆಯುತ್ತಿದ್ದು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು. ಇಂಡ್ಸ್ಯಾಟ್ ಪರೀಕ್ಷೆ ನಡೆಸಿ ವಿದ್ಯಾರ್ಥಿ ವೇತನ ನೀಡಿ ವಿದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ.

ರಾಷ್ಟ್ರೀಯ ಪೊಲೀಸ್ ಯುನಿವರ್ಸಿಟಿ ರಚನೆ, ನ್ಯಾಷನಲ್ ಫೊರೆನ್ಸಿಕ್ ಯೂನಿವರ್ಸಿಟಿ ಸ್ಥಾಪನೆ, ಮೆಡಿಕಲ್ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳನ್ನು ಪಿಪಿಪಿ ಮೋಡ್ ಗೆ ತರುವ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ ಬಜೆಟ್ ನಲ್ಲಿ ತಿಳಿಸಲಾಗಿದೆ.

ವಿದೇಶದಲ್ಲಿ ವೈದ್ಯರು, ಶುಶ್ರೂಷಕರಿಗೆ ಬೇಡಿಕೆ ಇದೆ. ನಮ್ಮಲ್ಲಿ ಅಂತಹ ವೈದ್ಯರು ಹಾಗೂ ಶುಶ್ರೂಷಕರಿದ್ದಾರೆ, ಆದರೆ, ಅವರಿಗೆ ಭಾಷೆ ಹಾಗೂ ತಾಂತ್ರಿಕ ಕೌಶಲ್ಯ ಅವಶ್ಯಕತೆ ಇದೆ. ಅಂತಹವರಿಗೆ ಸರ್ಕಾರವೇ ವಿಶೇಷ ತರಬೇತಿಯನ್ನು ನೀಡಿ ಉದ್ಯೋಗಕ್ಕೆ ನೆರವು ನೀಡಲಿದೆ.

ಬಜೆಟ್ ಮಾಹಿತಿಗೆ: www.prajavani.net/budget-2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.