ನಿರ್ಮಲಾ ಸೀತಾರಾಮನ್
– ಪಿಟಿಐ ಚಿತ್ರ
ನವದೆಹಲಿ: ವಿದೇಶ ಪ್ರವಾಸಕ್ಕೆ ಹೋಗುವವರಿಗೆ ವಿಧಿಸಲಾಗುವ ಟಿಸಿಎಸ್ ಅನ್ನು (ಮೂಲದಲ್ಲೇ ತೆರಿಗೆ ಕಡಿತ) ಶೇ 2 ರಷ್ಟು ಕಡಿತಗೊಳಿಸಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದ ವಿದೇಶ ಪ್ರವಾಸ ಪ್ಯಾಕೇಜ್‌ಗಳು ಅಗ್ಗವಾಗಲಿದೆ.
ಜೊತೆಗೆ ವಿದೇಶದಲ್ಲಿ ಶಿಕ್ಷಣ ಹಾಗೂ ಚಿಕಿತ್ಸೆ ಪಡೆಯುವವರ ಹೊರೆಯೂ ಕಡಿಮೆಯಾಗಲಿದೆ. ಉದಾರೀಕೃತ ಹಣ ರವಾನೆ ಯೋಜನೆ (ಎಲ್‌ಆರ್‌ಎಸ್)ಯಡಿ ವಿಧಿಸಲಾಗುತ್ತಿರುವ ಟಿಸಿಎಸ್ ಅನ್ನು ಶೇ 5ರಿಂದ ಶೇ 2ಕ್ಕೆ ಇಳಿಸುವ ಘೋಷಣೆ ಮಾಡಲಾಗಿದೆ . ಇದರಿಂದ ವಿದೇಶಕ್ಕೆ ಹಣ ಕಳುಹಿಸುವುಕ್ಕೆ ಇದ್ದ ಶುಲ್ಕ ಇಳಿಕೆಯಾಗಲಿದೆ.
ತೆರಿಗೆ ಕಡಿತ ನಿಯಮಗಳಲ್ಲಿನ ಗೊಂದಲವನ್ನು ತೆಗೆದುಹಾಕಲು, ಕಾರ್ಮಿಕರನ್ನು ಒದಗಿಸುವ ಸೇವೆಗಳ ಗುತ್ತಿಗೆದಾರರಿಗೆ ಪಾವತಿಗಳ ಅಡಿಯಲ್ಲಿ ಬರಲಿದೆ. ಹೀಗಾಗಿ ಅಂತಹ ಸೇವೆಗಳ ಮೇಲಿನ ಟಿಡಿಎಸ್ ಕೇವಲ ಶೇ 1 ಅಥವಾ ಶೇ 2 ಆಗಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.