ಆರ್ಥಿಕ ಸಮೀಕ್ಷೆ (ಚಿತ್ರ ಕೃಪೆ; ಡಿಎಚ್)
ನವದೆಹಲಿ: ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಮತ್ತು ಅವರ ತಂಡವು ರಚಿಸಿರುವ ಆರ್ಥಿಕ ಸಮೀಕ್ಷೆ (2024-25)ಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದರು.
ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆ ಆರ್ಥಿಕ ಸಮೀಕ್ಷೆಯಾಗಿದೆ.
2024-25ರ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು ಈ ಕೆಳಗಿನಂತಿವೆ...
* ಜಾಗತಿಕ ಅನಿಶ್ಚಿತತೆ ನಡುವೆಯೂ, ಪ್ರಸಕ್ತ ಹಣಕಾಸು ವರ್ಷ (2024-25)ದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.4 ರಷ್ಟಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
* 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.3 ರಿಂದ ಶೇ.6.8ರಷ್ಟು ಇರಲಿದೆ ಅಂದಾಜಿಸಲಾಗಿದೆ.
* ಭಾರತದ ಆರ್ಥಿಕ ಮೂಲಭೂತ ಅಂಶಗಳು ಸದೃಢವಾಗಿವೆ
* ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ವಿವೇಕಯುತ ನೀತಿ ನಿರ್ವಹಣೆ, ವಿವಿಧ ಕಾರ್ಯತಂತ್ರಗಳು ಮತ್ತು ದೇಶೀಯ ಮೂಲಭೂತ ಅಂಶಗಳನ್ನು ಬಲಪಡಿಸುವ ಅಗತ್ಯವಿದೆ
* ಜಾಗತಿಕವಾಗಿ ಉಂಟಾಗಿರುವ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದಾಗಿ ಹಣದುಬ್ಬರದ ಅಪಾಯಗಳು ಉಳಿದಿವೆ
* ಸಾರ್ವಜನಿಕ ಬಂಡವಾಳ ವೆಚ್ಚ ಹಾಗೂ ವಾಣಿಜ್ಯ ಮತ್ತು ವ್ಯಾಪಾರದ ನಿರೀಕ್ಷೆಗಳನ್ನು ಸುಧಾರಿಸುವ ಹೂಡಿಕೆ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
* ತಳಮಟ್ಟದ ರಚನಾತ್ಮಕ ಸುಧಾರಣೆಗಳ ಮೂಲಕ ಭಾರತವು ತನ್ನ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಅಗತ್ಯವಿದೆ
* ದೇಶದ ವಿದೇಶೀ ವಿನಿಮಯ 640.3 ಶತಕೋಟಿ ಡಾಲರ್ ಇದೆ.
* ಮುಂದಿನ ಎರಡು ದಶಕಗಳಲ್ಲಿ ಮೂಲಸೌಕರ್ಯ ಹೂಡಿಕೆಯ ಅಗತ್ಯವಿದೆ
* ಗುಜರಾತ್, ಉತ್ತರಾಖಂಡ್ ಮತ್ತು ಹಿಮಾಚಲಪ್ರದೇಶದಂತಹ ಕೆಲವು ರಾಜ್ಯಗಳು ಕೈಗಾರಿಕಾ ವಲಯದಲ್ಲಿ ಜನರಿಗೆ ಆದಾಯವನ್ನು ಸೃಷ್ಟಿಸಲು ಸಮರ್ಥವಾಗಿವೆ
* ಸೇವಾ ಆಧಾರಿತ ವಲಯ ಬೆಳವಣಿಗೆಯಾಗುತ್ತಿದ್ದು ಕೃತಕ ಬುದ್ಧಿಮತ್ತೆಯ ಪ್ರಭಾವ ಇದಕ್ಕೆ ಪೂರಕವಾಗಿದೆ.
* ಕಾರ್ಪೊರೇಟ್ ವಲಯವು ಉನ್ನತ ಮಟ್ಟದ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು.
* ಹವಾಮಾನ ವೈಪರಿತ್ಯದಿಂದಾಗುವ ಬೆಳೆ ಹಾನಿಯನ್ನು ಕಡಿಮೆ ಮಾಡಬೇಕು ಮತ್ತು ಇಳುವರಿಯನ್ನು ಹೆಚ್ಚಿಸಬೇಕು. ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ಟೊಮೆಟೊ, ಈರುಳ್ಳಿ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ.
* 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತ ಎರಡು ದಶಕಗಳವರೆಗೆ ಸರಾಸರಿ ಶೇ. 8ರಷ್ಟು ಬೆಳವಣಿಗೆಯನ್ನು ಹೊಂದಿರಬೇಕು.
* ದೇಶದ ಬೆಳವಣಿಗೆಗೆ ಪೂರಕವಾಗಿ ಹೂಡಿಕೆ ಪ್ರಮಾಣ ಶೇ.31 ರಿಂದ ಶೇ.35ಕ್ಕೆ ಹೆಚ್ಚಾಗಬೇಕು.
* ಸುಧಾರಣೆಗಳು, ಆರ್ಥಿಕ ನೀತಿಗಳ ಗಮನವು ಈಗ ವ್ಯವಸ್ಥಿತವಾಗಿ ನಿಯಂತ್ರಣವನ್ನು ತೆಗೆದುಹಾಕುವುದರ ಮೇಲೆ ಇರಬೇಕು
* ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.