ADVERTISEMENT

Union Budget: ನಿರ್ಮಲಾ ಬಜೆಟ್‌ನಲ್ಲಿ ‘ಜೆನ್‌–ಝೀ’ಗಳಿಗೆ ಸಿಕ್ಕಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 12:28 IST
Last Updated 1 ಫೆಬ್ರುವರಿ 2026, 12:28 IST
   

ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ 2026–27ನೇ ಸಾಲಿನ ಬಜೆಟ್‌ನಲ್ಲಿ ಜೆನ್‌–ಝೀ ತಲೆಮಾರಿನವರಿಗೆ ಅನುಕೂಲವಾಗುವ ಘೋಷಣೆಗಳಿವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

  • ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್ , ಗೇಮಿಂಗ್ ಮತ್ತು ಕಾಮಿಕ್ಸ್ ವಲಯಕ್ಕೆ ಉತ್ತೇಜನ

  • ಭಾರತದ ಡಿಜಿಟಲ್ ಕ್ರಿಯೇಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ₹ 1.4 ಲಕ್ಷ ಕೋಟಿ ಮೀಸಲು

    ADVERTISEMENT
  • ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್‌ನ ಬೆಂಬಲದೊಂದಿಗೆ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆ.

  • ಸಂಸ್ಕೃತಿ, ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳನ್ನು ಒಳಗೊಂಡ ‘ಆರೆಂಜ್ ಎಕಾನಮಿ’ಗೆ ಹೆಚ್ಚಿನ ಬಲ

  • ರಾಷ್ಟ್ರೀಯ ವಿನ್ಯಾಸ ಸಂಸ್ಥೆಯನ್ನು (National Institute of Design) ಸ್ಥಾಪನೆ.

  • ಪ್ರವಾಸೋದ್ಯಮದಲ್ಲಿ ಅವಕಾಶಕ್ಕೆ ರಾಷ್ಟ್ರೀಯ ಆತಿಥ್ಯ ಸಂಸ್ಥೆ (National Institute of Hospitality) ಸ್ಥಾಪನೆ.

  • ಉನ್ನತ ಶಿಕ್ಷಣಕ್ಕೆ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಾಣ.

  • ಪ್ರಮುಖ ಕೈಗಾರಿಕಾ ಹಾಗೂ ಸರಕು ಕಾರಿಡಾರ್‌ಗಳಲ್ಲಿ 5 ವಿಶ್ವವಿದ್ಯಾಲಯ ಟೌನ್‌ಶಿಪ್ ನಿರ್ಮಾಣ.

  • ಉನ್ನತ ಮಟ್ಟದ ‘ಶಿಕ್ಷಣದಿಂದ ಉದ್ಯೋಗ ಹಾಗೂ ಉದ್ಯಮಶೀಲತೆ’ಸ್ಥಾಯಿ ಸಮಿತಿ ರಚನೆ.

  • ಖೆಲೋ ಇಂಡಿಯಾ ಅಭಿಯಾನಕ್ಕೆ ಉತ್ತೇಜನ

  • ಉತ್ತರ ಭಾರತದಲ್ಲಿ ಎರಡು ನಿಮ್ಹಾನ್ಸ್ ಸ್ಥಾಪನೆ (ಉದ್ಯೋಗ ಸೃಷ್ಟಿ)

  • ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವವರಿಗೆ ಉದಾರೀಕೃತ ಹಣ ರವಾನೆ ಯೋಜನೆ (ಎಲ್‌ಆರ್‌ಎಸ್‌)ಯಡಿ ವಿಧಿಸಲಾಗುತ್ತಿರುವ ಟಿಸಿಎಸ್‌ ಶೇ 5ರಿಂದ ಶೇ 2ಕ್ಕೆ ಇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.