ವಿಶಾಖಪಟ್ಟಣಂ: ಮುಂದಿನ 10 ವರ್ಷದಲ್ಲಿ ಅದಾನಿ ಸಮೂಹವು ಆಂಧ್ರ ಪ್ರದೇಶದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಎಂದು ಕರಣ್ ಅದಾನಿ ಶುಕ್ರವಾರ ಹೇಳಿದ್ದಾರೆ.
ಆಂಧ್ರ ಪ್ರದೇಶ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹೂಡಿಕೆಯು ಬಂದರು, ಸಿಮೆಂಟ್, ದತ್ತಾಂಶ ಕೇಂದ್ರ, ಇಂಧನ ಹಾಗೂ ಸುಧಾರಿತ ಉತ್ಪಾದನೆ ವಲಯದಲ್ಲಿ ಇರಲಿದೆ ಎಂದು ಹೇಳಿದ್ದಾರೆ.
ಉದ್ಯಮಿ ಗೌತಮ್ ಅದಾನಿಯವರ ಹಿರಿಯ ಪುತ್ರರಾಗಿರುವ ಕರಣ್, ಸಮೂಹದ15 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ‘ವೈಜಾಗ್ ಟೆಕ್ ಪಾರ್ಕ್‘ ದೃಷ್ಟಿಕೋನವನ್ನು ಇದೇ ವೇಳೆ ಅನಾವರಣಗೊಳಿಸಿದ್ದಾರೆ. ಈ ಪಾರ್ಕ್‌ನಲ್ಲಿ ಗೂಗಲ್ ಸಹಭಾಗಿತ್ವದೊಂದಿಗೆ ವಿಶ್ವದ ಅತಿ ದೊಡ್ಡ ಪರಿಸರ ಸ್ನೇಹಿ ಹೈಪರ್‌ಸ್ಕೇಲ್ ದತ್ತಾಂಶ ಕೇಂದ್ರವೂ ಇರಲಿದೆ.
ಆಂಧ್ರ ಪ್ರದೇಶದಲ್ಲಿ ಸದ್ಯ ಅದಾನಿ ಸಮೂಹ ಮಾಡಿರುವ ಹೂಡಿಕೆಯು ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಜಿಸಿದೆ. ಮುಂದಿನ ಯೋಜನೆಗಳಲ್ಲಿ ಭಾರಿ ಪ್ರಮಾಣದ ಉದ್ಯೋಗ ಸೃಷ್ಟಿಯ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.