ADVERTISEMENT

ಏಷ್ಯಾದಲ್ಲೇ ಎರಡನೇ ಅತೀದೊಡ್ಡ ಕಚೇರಿ ಉದ್ಘಾಟಿಸಿದ ‌ಅಮೆಜಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 9:57 IST
Last Updated 25 ಫೆಬ್ರುವರಿ 2026, 9:57 IST
ಅಮೆಜಾನ್‌
ಅಮೆಜಾನ್‌   

ವಿಶ್ವದ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ‘ಅಮೆಜಾನ್’ ಬೆಂಗಳೂರಿನಲ್ಲಿ ತನ್ನ ಕಚೇರಿ ಒಂದನ್ನು ಅಧಿಕೃತವಾಗಿ ಉದ್ಟಾಟಿಸಿದೆ. ಇದು ಏಷ್ಯಾದಲ್ಲೇ ಅದರ ಎರಡನೇ ಅತೀ ದೊಡ್ಡ ಕಚೇರಿಯಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 15‌ ಕಿ.ಮೀ ದೂರದಲ್ಲಿ 5 ಎಕರೆ ಪ್ರದೇಶದಲ್ಲಿ ಈ ಕಚೇರಿಯನ್ನು ನಿರ್ಮಿಸಲಾಗಿದೆ. 12 ಅಂತಸ್ತಿನ ಕಟ್ಟದಲ್ಲಿ ಇ-ಕಾಮರ್ಸ್, ಪಾವತಿ, ತಂತ್ರಜ್ಞಾನ ಮತ್ತು ಮಾರಾಟಗಾರರ ಸೇವೆ ಇರಲಿದೆ. ಅಲ್ಲದೆ ಕಂನಿಯಲ್ಲಿ 7,000ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.  

ಈ ಕಾರ್ಪೋರೇಟ್‌ ಕ್ಯಾಂಪಸ್‌ನಲ್ಲಿ ಮೀಟಿಂಗ್ ಹಾಲ್‌ಗಳು, 200 ಕ್ಕೂ ಹೆಚ್ಚು ಜನರಿಗೆ ಆತಿಥ್ಯ ವಹಿಸುವ ಬೃಹತ್‌ ಹಾಲ್‌ಗಳು. ಉದ್ಯೋಗಿಗಳಿಗೆ ಆಟವಾಡಲು ಬ್ಯಾಸ್ಕೆಟ್‌ಬಾಲ್ ಸೇರಿದಂತೆ ಇತರೆ ಆಟದ ಮೈದಾನಗಳು ಇದೆ ಜೊತೆಗೆ ಜಾಗತಿಕ ಅಡುಗೆಗಳನ್ನು ಪೂರೈಸುವ ವಿಶೇಷ ಕೆಫಿಟೇರಿಯಾ ಇದೆ ಎಂದು ವರದಿಯಾಗಿದೆ. 

ADVERTISEMENT

ಈ ಹೊಸ ಕ್ಯಾಂಪಸ್ ಭಾರತದಲ್ಲಿ ಅಮೆಜಾನ್‌ನ ವಿಸ್ತರಣೆಯ ಭಾಗವಾಗಿದೆ. ಕಂಪನಿಯು ಈಗಾಗಲೇ ದೇಶದಲ್ಲಿ ₹3.64 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಿದೆ ಮತ್ತು 2030ರ ವೇಳೆಗೆ ಹೆಚ್ಚುವರಿಯಾಗಿ ₹3.18 ಲಕ್ಷ ಕೋಟಿ ಹೂಡಿಕೆಗೆ ಮಾಡಲಿದೆ ಎಂದು ವರದಿಯಾಗಿದೆ. 

ಕರ್ನಾಟಕದಲ್ಲಿ ಅಮೆಜಾನ್‌ನ ಹೆಜ್ಜೆಗುರುತು

ಕರ್ನಾಟಕದಲ್ಲಿ ಅಮೇಜಾನ್ ಸಂಸ್ಥೆಯ 10 ಕಾರ್ಪೊರೇಟ್ ಕಚೇರಿಗಳಿವೆ. 7 ಪೂರೈಕೆ ಕೇಂದ್ರಗಳು, 3 ವಿಭಾಗೀಯ ಕೇಂದ್ರಗಳು, 130ಕ್ಕೂ ಅಧಿಕ ವಿತರಣಾ ಕೇಂದ್ರಗಳಿವೆ. ಕರ್ನಾಟಕದಲ್ಲಿ ಒಟ್ಟು 80,000ಕ್ಕೂ ಅಧಿಕ ಡೆಲಿವರಿ ಬಾಯ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.