ADVERTISEMENT

ಹಂತ ಹಂತವಾಗಿ ಮುಚ್ಚಲಿದೆ ಅಮೆಜಾನ್‌ ಅಕಾಡೆಮಿ

ರಾಯಿಟರ್ಸ್
Published 24 ನವೆಂಬರ್ 2022, 16:44 IST
Last Updated 24 ನವೆಂಬರ್ 2022, 16:44 IST

ಬೆಂಗಳೂರು: ಅಮೆಜಾನ್‌ ಡಾಟ್‌ ಕಾಂ ಕಂಪನಿಯು ಭಾರತದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳ ಹಿಂದೆ ಆರಂಭಿಸಿದ ಆನ್‌ಲೈನ್‌ ಕಲಿಕಾ ವೇದಿಕೆಯನ್ನು ಮುಚ್ಚುವುದಾಗಿ ಗುರುವಾರ ತಿಳಿಸಿದೆ. ಆದರೆ, ಇದಕ್ಕೆ ನಿರ್ದಿಷ್ಟ ಕಾರಣವನ್ನು ಕಂಪನಿ ನೀಡಿಲ್ಲ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ವರ್ಚುವಲ್‌ ಕಲಿಕೆಗೆ ಬೇಡಿಕೆ ಹೆಚ್ಚಾಗಿದ್ದರಿಂದ ‘ದಿ ಅಮೆಜಾನ್‌ ಅಕಾಡೆಮಿ ಪ್ಲಾಟ್‌ಫಾರಂ’ ಆರಂಭಿಸಲಾಯಿತು. ಈ ವೇದಿಕೆಯ ಮೂಲಕ ಜೆಇಇ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ನೀಡಲಾಗುತ್ತಿದೆ. ವೇದಿಕೆಯನ್ನು ಬಳಸುತ್ತಿರುವ ಹಾಲಿ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಲಾಕ್‌ಡೌನ್‌ ತೆರವಾದ ಬಳಿಕ ಶಾಲೆಗಳು ಮತ್ತು ಕೋಚಿಂಗ್‌ ಕೇಂದ್ರಗಳು ಮತ್ತೆ ಆರಂಭ ಆಗತೊಡಗಿವೆ. ಇದರಿಂದಾಗಿ ಹಲವು ತಂತ್ರಜ್ಞಾನ ಆಧಾರಿತ ಶಿಕ್ಷಣ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿವೆ. ಬೈಜುಸ್‌ ಕಂಪನಿಯು 2,500 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಕಳೆದ ತಿಂಗಳು ಹೇಳಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಅನ್‌ಅಕಾಡೆಮಿ, ಟಾಪರ್‌, ವೈಟ್‌ಹ್ಯಾಟ್‌ ಜೆಆರ್‌ ಮತ್ತು ವೇದಾಂತು ಕಂಪನಿಗಳು ಸಹ ಸಿಬ್ಬಂದಿ ಕಡಿತ ಮಾಡುವುದಾಗಿ ಈಗಾಗಲೇ ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.