ನವದೆಹಲಿ: ಐಫೋನ್ ತಯಾರಕ ಕಂಪನಿ ಆ್ಯಪಲ್, ಸೆಪ್ಟೆಂಬರ್ 4ರಂದು ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ಮಳಿಗೆ ತೆರೆಯಲಾಗುವುದು ಎಂದು ಮಂಗಳವಾರ ತಿಳಿಸಿದೆ.
ಇದು ಭಾರತದಲ್ಲಿ ಕಂಪನಿ ಆರಂಭಿಸುತ್ತಿರುವ ನಾಲ್ಕನೇ ಮಳಿಗೆ.
ಈ ಮಳಿಗೆ ಆರಂಭಿಸುವುದರಿಂದ ಆ್ಯಪಲ್ ಕಂಪನಿಯ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿದೆ. ಅಲ್ಲದೆ, ನೇರವಾಗಿ ಸೇವೆ ನೀಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಈಗಾಗಲೇ ಬೆಂಗಳೂರಿನ ಹೆಬ್ಬಾಳದಲ್ಲಿ ಕಂಪನಿಯು ತನ್ನ ಮೂರನೇ ಮಳಿಗೆಯನ್ನು ಸೆಪ್ಟೆಂಬರ್ 2ರಂದು ಆರಂಭಿಸಲಾಗುವುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.