ADVERTISEMENT

ಮಲಬಾರ್‌: ಆಷಾಢ ಬೆಲೆ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 15:59 IST
Last Updated 29 ಜೂನ್ 2020, 15:59 IST
ಮಲಬಾರ್‌ ಗೋಲ್ಡ್‌ ಆಭರಣ
ಮಲಬಾರ್‌ ಗೋಲ್ಡ್‌ ಆಭರಣ   

ಬೆಂಗಳೂರು: ಚಿನ್ನ ಮತ್ತು ವಜ್ರದ ಆಭರಣ ಮಾರಾಟದ ಅತಿದೊಡ್ಡ ಸಂಸ್ಥೆಯಾಗಿರುವ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ರಾಜ್ಯದಾದ್ಯಂತ ‘ಆಷಾಢ ಬೆಲೆ ಭರವಸೆ‘ ವಿಶೇಷ ಪ್ರಚಾರ ಆಂದೋಲನ ಹಮ್ಮಿಕೊಂಡಿದೆ.

ಆಗಸ್ಟ್‌ 2ರವರೆಗೆ ನಡೆಯಲಿರುವ ಈ ವಿಶೇಷ ಮಾರಾಟ ಬೆಲೆಯ ಸಂದರ್ಭದಲ್ಲಿ ಗ್ರಾಹಕರು ಹಲವಾರು ಕೊಡುಗೆಗಳನ್ನು ಪಡೆಯಬಹುದು.

ಚಿನ್ನದ ಮೇಕಿಂಗ್‌ ಚಾರ್ಜಸ್‌ನಲ್ಲಿ ಶೇ 20 ರಿಂದ ಶೇ 50ರಷ್ಟು ಡಿಸ್ಕೌಂಟ್‌, ವಜ್ರದ ಮೊತ್ತದಲ್ಲಿ ಶೇ 25ರವರೆಗೆ ಡಿಸ್ಕೌಂಟ್‌, 22 ಕ್ಯಾರಟ್‌ನ ಹಳೆಯ ಚಿನ್ನದ ವಿನಿಮಯಕ್ಕೆ ಶೂನ್ಯ ಕಡಿತ, ಕನಿಷ್ಠ ಶೇ 10ರಷ್ಟು ಬೆಲೆ ಪಾವತಿಸಿ ಮುಂಗಡ ಖರೀದಿಸಿ ಚಿನ್ನದ ಬೆಲೆ ಏರಿಕೆ ವಿರುದ್ಧ ರಕ್ಷಣೆ ಪಡೆಯುವ ಸೌಲಭ್ಯಗಳನ್ನು ಒದಗಿಸಿದೆ.

ADVERTISEMENT

ಈ ಎಲ್ಲ ಗ್ರಾಹಕ ಸ್ನೇಹಿ ಕೊಡುಗೆಗಳ ಜತೆಗೆ, ಸಂಸ್ಥೆಯು ಗ್ರಾಹಕರ ಬಳಿಯ ಯಾವುದೇ ಬ್ರ್ಯಾಂಡ್‌ನ ಹಳೆಯ ಚಿನ್ನಾಭರಣಗಳನ್ನು ಖರೀದಿಸಲಿದೆ. ಹಣ ಪಾವತಿಯು ಚೆಕ್ಕ ಇಲ್ಲವೆ ಆರ್‌ಟಿಜಿಎಸ್‌ ಮೂಲಕ ನಡೆಯಲಿದೆ.

ಚಿನ್ನಾಭರಣಗಳ ಮರು ಖರೀದಿ, ವಿಮೆ ರಕ್ಷಣೆ ಮತ್ತು ನಿರ್ವಹಣೆ ಸೌಲಭ್ಯವನ್ನೂ ಒದಗಿಸಲಾಗುವುದು. ಎಲ್ಲ ಮಳಿಗೆಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.