ADVERTISEMENT

ವಾಹನ ಮಾರಾಟ ಎರಡಂಕಿ ಕುಸಿತ

ಪಿಟಿಐ
Published 1 ಆಗಸ್ಟ್ 2019, 19:45 IST
Last Updated 1 ಆಗಸ್ಟ್ 2019, 19:45 IST
   

ನವದೆಹಲಿ: ದೇಶದ ವಾಹನ ಉದ್ಯಮ ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಜುಲೈನ ಮಾರಾಟದಲ್ಲಿ ಎರಡಂಕಿ ಕುಸಿತ ಕಂಡಿದೆ.

ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆ ಇರುವುದರಿಂದಾಗಿ ವಾಹನ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. 2018ರ ಜೂನ್‌ನಿಂದಲೂ ವಾಹನ ಮಾರಾಟ ಇಳಿಮುಖವಾಗಿಯೇ ಇದೆ.

ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾದ ಮಾರಾಟ ಶೇ 36.3ರಷ್ಟು ಇಳಿಕೆಯಾಗಿದ್ದು, 1,54,150 ಕಾರುಗಳನ್ನು ಮಾರಾಟ ಮಾಡಿದೆ. 2017ರ ಜೂನ್‌ನಲ್ಲಿ ಕಂಪನಿ ಮಾರಾಟ 1 ಲಕ್ಷಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿತ್ತು.

ADVERTISEMENT

ಹುಂಡೈ ಮೋಟರ್‌ ಇಂಡಿಯಾ ಲಿಮಿಟೆಡ್‌ ಮಾರಾಟದಲ್ಲಿ ಶೇ 10ರಷ್ಟು ಇಳಿಕೆಯಾಗಿದೆ.

ಯುಟಿಲಿಟಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮಾರಾಟವು ಶೇ 16ರಷ್ಟು ಕಡಿಮೆಯಾಗಿದೆ. ಕಂಪನಿಯ ಪ್ರಯಾಣಿಕ ವಾಹನ ಮಾರಾಟದಲ್ಲಿಯೂ ಶೇ 15ರಷ್ಟು ಇಳಿಕೆಯಾಗಿದೆ.

‘ಗ್ರಾಹಕರ ಬೇಡಿಕೆ ಹೆಚ್ಚಿಸಲು ಉದ್ಯಮಕ್ಕೆ ಉತ್ತೇಜಕ ಕ್ರಮಗಳ ಅಗತ್ಯವಿದೆ’ ಎಂದು ಮಹೀಂದ್ರಾ ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ವಿಜಯ್‌ ರಾಮ್‌ ನಕ್ರಾ ಹೇಳಿದ್ದಾರೆ.

ಹೋಂಡಾ ಕಾರ್ಸ್‌ ಇಂಡಿಯಾದ ಮಾರಾಟ ಶೇ 49ರಷ್ಟು ಇಳಿಕೆಯಾಗಿದೆ. ಟೊಯೋಟ ಕಿರ್ಲೋಸ್ಕರ್‌ ಮೋಟರ್‌ (ಟಿಕೆಎಂ) ಮಾರಾಟ ಶೇ 24ರಷ್ಟು ಇಳಿಕೆಯಾಗಿದೆ.

ದ್ವಿಚಕ್ರ ವಾಹನ
ದ್ವಿಚಕ್ರ ವಾಹನ ವಿಭಾಗದಲ್ಲಿ ಬಜಾಜ್‌ ಆಟೊದ ಮಾರಾಟ ಶೇ 13ರಷ್ಟು ಇಳಿಕೆಯಾಗಿದೆ.ಟಿವಿಎಸ್‌ ಮೋಟರ್‌ ಕಂಪನಿಯ ಮಾರಾಟದಲ್ಲಿ ಶೇ 15.72ರಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.