ನವದೆಹಲಿ: 2024–25ರ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಬಜಾಜ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ₹1,265 ಕೋಟಿ ವರಮಾನ ಗಳಿಸಿದೆ.
2023–24ರ ಆರ್ಥಿಕ ವರ್ಷದಲ್ಲಿ ₹1,188 ಕೋಟಿ ಗಳಿಸಿತ್ತು. ಈ ವರಮಾನಕ್ಕೆ ಹೋಲಿಸಿದರೆ ಶೇ 6.5ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಸೋಮವಾರ ಷೇರುಪೇಟೆಗೆ ತಿಳಿಸಿದೆ.
ನಿವ್ವಳ ಲಾಭ ₹59 ಕೋಟಿ ಆಗಿದೆ. ಒಟ್ಟು ವೆಚ್ಚವು ₹1,231 ಕೋಟಿಯಾಗಿದೆ.
₹2 ಮುಖಬೆಲೆಯ ಪ್ರತಿ ಷೇರಿಗೆ ₹3 ಲಾಭಾಂಶ ನೀಡಲು ಕಂಪನಿ ಆಡಳಿತ ಮಂಡಳಿ ಅನುಮೋದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.