ADVERTISEMENT

ಬ್ಯಾಂಕ್‌ಗಳಿಗೆ ₹3,592 ಕೋಟಿ ವಂಚನೆ: ಸಿಬಿಐ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 20:16 IST
Last Updated 21 ಜನವರಿ 2020, 20:16 IST
   

ನವದೆಹಲಿ: 14 ಬ್ಯಾಂಕ್‌ಗಳಿಗೆ ಒಟ್ಟು ₹3,592.48 ಕೋಟಿ ವಂಚಿಸಿದ ಆರೋಪದ ಮೇಲೆ ಕಾನ್ಪುರದ ಫ್ರಾಸ್ಟ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ವಿರುದ್ಧ ಸಿಬಿಐ ಮಂಗಳವಾರ ದೂರು ದಾಖಲಿಸಿಕೊಂಡಿದೆ. ಬ್ಯಾಂಕ್‌ ಆಫ್‌ ಇಂಡಿಯಾದ ಕಾನ್ಪುರ ವಲಯ ಕಚೇರಿಯು ಸಂಸ್ಥೆಯ ವಿರುದ್ಧ ದೂರು ನೀಡಿದೆ.

ಸಂಸ್ಥೆಯ ನಿರ್ದೇಶಕರಾದ ಉದಯ್‌ ದೇಸಾಯಿ, ಅವರ ಪತ್ನಿ ನೀಲಿಮಾ, ‍ಪುತ್ರ ಸುಜಯ್‌ ದೇಸಾಯಿ, ಪುತ್ರಿ ಸಂಜನಾ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು ದೇಶಬಿಟ್ಟು ಹೋಗುವುದನ್ನು ತಡೆಯಲು 10 ಮಂದಿಯ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿ ಮಾಡಲಾಗಿದೆ.

‘ಈ ಸಂಸ್ಥೆಯ ಪ್ರವರ್ತಕರು ಯಾವುದೇ ವ್ಯಾಪಾರ ಚಟುವಟಿಕೆ ನಡೆಸುತ್ತಿರಲಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮ್ಮದು ವ್ಯಾಪಾರಿ ಸಂಸ್ಥೆ ಎಂದು ಹೇಳಿಕೊಂಡು ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲ ಪಡೆದಿದ್ದರು. ಆ ಹಣವನ್ನು ಬೇರೆಬೇರೆ ಉದ್ದೇಶಗಳಿಗೆ ಬಳಸಿದ್ದರು. ಸಾಲ ಮರುಪಾವತಿಯಲ್ಲಿ ವಿಫಲರಾಗಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.