ADVERTISEMENT

ಬೆಂಗಳೂರಿನಲ್ಲಿ ಕಚೇರಿ ಸ್ಥಳದ ಗುತ್ತಿಗೆ ಶೇ 28ರಷ್ಟು ಇಳಿಕೆ: ವೆಸ್ಟಿಯನ್‌ ವರದಿ

ಬೆಂಗಳೂರಿನಲ್ಲಿ ಕಚೇರಿ ಸ್ಥಳವನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ 28ರಷ್ಟು ಇಳಿಕೆ ಕಂಡಿದೆ

ಪಿಟಿಐ
Published 20 ನವೆಂಬರ್ 2023, 13:59 IST
Last Updated 20 ನವೆಂಬರ್ 2023, 13:59 IST
<div class="paragraphs"><p>ಸಿಲಿಕಾನ್‌ ಸಿಟಿ ಬೆಂಗಳೂರು</p></div>

ಸಿಲಿಕಾನ್‌ ಸಿಟಿ ಬೆಂಗಳೂರು

   

ನವದೆಹಲಿ: ಬೆಂಗಳೂರಿನಲ್ಲಿ ಕಚೇರಿ ಸ್ಥಳವನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ 28ರಷ್ಟು ಇಳಿಕೆ ಕಂಡಿದೆ. ಹೊಸ ಕಚೇರಿ ಸ್ಥಳಕ್ಕೆ ಬೇಡಿಕೆಯೂ ಶೇ 25ರಷ್ಟು ಕಡಿಮೆ ಆಗಿದೆ ಎಂದು ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ವೆಸ್ಟಿಯನ್‌ ಹೇಳಿದೆ.

ಬೆಂಗಳೂರಿನಲ್ಲಿ 2023ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 36 ಲಕ್ಷ ಚದರ ಅಡಿಯಷ್ಟು ಕಚೇರಿ ಸ್ಥಳವನ್ನು ಗುತ್ತಿಗೆ ನೀಡಲಾಗಿದೆ. 2022ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 50 ಲಕ್ಷ ಚದರ ಅಡಿ ಗುತ್ತಿಗೆ ನೀಡಲಾಗಿತ್ತು. ಕಂಪನಿಗಳಿಂದ ಬೇಡಿಕೆ ಬರದೇ ಇರುವುದೇ ಕಚೇರಿ ಸ್ಥಳದ ಗುತ್ತಿಗೆ ಇಳಿಕೆ ಕಾಣಲು ಕಾರಣ ಎಂದು ತಿಳಿಸಿದೆ.

ADVERTISEMENT

ಬೆಂಗಳೂರು ಸೇರಿದಂತೆ ಒಟ್ಟು 7 ನಗರಗಳಲ್ಲಿ 2023ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಕಚೇರಿ ಸ್ಥಳದ ಗುತ್ತಿಗೆ ನೀಡುವ ವರದಿಯನ್ನು ಕಂಪನಿಯು ಮಂಗಳವಾರ ಬಿಡುಗಡೆ ಮಾಡಿದೆ. ಅದರಂತೆ, ಈ ನಗರಗಳಲ್ಲಿ ಕಚೇರಿ ಸ್ಥಳದ ಗುತ್ತಿಗೆಯು ಶೇ 21ರಷ್ಟು ಹೆಚ್ಚಾಗಿ 1.59 ಕೋಟಿ ಚದರ ಅಡಿಗೆ ತಲುಪಿದೆ. 2022ರ ಇದೇ ಅವಧಿಯಲ್ಲಿ 1.31 ಕೋಟಿ ಚದರ ಅಡಿಗೆ ಬೇಡಿಕೆ ಬಂದಿತ್ತು. ದೆಹಲಿ–ಎನ್‌ಸಿಆರ್‌‌ನಲ್ಲಿ ಶೇ 14ರಷ್ಟು ಇಳಿಕೆ ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ ಮತ್ತು ಕೋಲ್ಕತ್ತದಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದು ಅದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.