ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲವಿರುವ ಕೃತಕ ಬುದ್ಧಿಮತ್ತೆಯ (ಎ.ಐ) ಪ್ರಮುಖ ಯೋಜನೆ ‘ಭಾರತ್‌ಜೆನ್’ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ₹988.6 ಕೋಟಿ ಧನಸಹಾಯವನ್ನು ನೀಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
₹1,500 ಕೋಟಿ ಮೊತ್ತದ ‘ಇಂಡಿಯಾ ಎ.ಐ ಮಿಷನ್ 2025’ ಅಡಿಯಲ್ಲಿ ಭಾರತದ ಸರ್ಕಾರಿ ಎ.ಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಭಾರತ್‌ಜೆನ್‌ನ ವಹಿಸಬಹುದಾದ ಪಾತ್ರವನ್ನು ಈ ಧನಸಹಾಯವು ತೋರಿಸುತ್ತದೆ.
ಶಕ್ತಿಯುತ ಎ.ಐ ಮಾದರಿಗಳನ್ನು ರಚಿಸಲು ಭಾರತ್‌ಜೆನ್‌ಗೆ ಈ ಧನಸಹಾಯವು ನೆರವು ನೀಡುತ್ತದೆ. ಇದು ಧ್ವನಿಯನ್ನು ಅಕ್ಷರಗಳಿಗೆ ಪರಿವರ್ತಿಸುವ, ಅಕ್ಷರಗಳನ್ನು ಓದಿಹೇಳುವ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.