ADVERTISEMENT

ಮಿಧಾನಿ ಜೊತೆ ಪಾಲುದಾರಿಕೆಗೆ ಮುಂದಾದ ಬೋಯಿಂಗ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 14:32 IST
Last Updated 19 ಅಕ್ಟೋಬರ್ 2022, 14:32 IST
   

ಬೆಂಗಳೂರು: ವೈಮಾನಿಕ ಉದ್ಯಮಕ್ಕೆ ಅಗತ್ಯವಿರುವ ಬಿಡಿಭಾಗಗಳ ತಯಾರಿಕೆಗೆ ಬೇಕಿರುವ ಕಚ್ಚಾ ವಸ್ತುಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲು ತಾನು ಮಿಶ್ರ ಧಾತು ನಿಗಮ್ ಲಿಮಿಟೆಡ್‌ (ಮಿಧಾನಿ) ಜೊತೆ ಪಾಲುದಾರಿಕೆಗೆ ಮುಂದಾಗುತ್ತಿರುವುದಾಗಿ ಬೋಯಿಂಗ್ ಇಂಡಿಯಾ ತಿಳಿಸಿದೆ.

ವೈಮಾನಿಕ ಉದ್ಯಮಕ್ಕೆ ಬೇಕಿರುವ ವಿಶೇಷ ವಸ್ತುಗಳು ಹಾಗೂ ಮಿಶ್ರಲೋಹಗಳು ದೇಶದಲ್ಲಿಯೇ ಲಭ್ಯವಾಗಬೇಕಿರುವುದು ದೇಶದ ರಕ್ಷಣಾ ಉದ್ಯಮವನ್ನು ಮತ್ತು ವೈಮಾನಿಕ ಉದ್ಯಮವನ್ನು ಸ್ವಾವಲಂಬಿ ಆಗಿಸುವಲ್ಲಿ ಮಹತ್ವದ್ದು ಎಂದು ಪ್ರಕಟಣೆ ಹೇಳಿದೆ.

‘ಬೋಯಿಂಗ್‌ನ ಪೂರೈಕೆ ವ್ಯವಸ್ಥೆಯಲ್ಲಿ ಸರ್ಕಾರಿ ಕಂಪನಿಗಳು ಮಹತ್ವದ ಸ್ಥಾನ ಪಡೆದಿವೆ. ಮಿಧಾನಿ ಜೊತೆ ಆಗಬಹುದಾದ ಪಾಲುದಾರಿಕೆಯು ಭಾರತದಲ್ಲಿ ಬೋಯಿಂಗ್‌ನ ಪೂರೈಕೆ ನೆಲೆಯನ್ನು ಗಟ್ಟಿಗೊಳಿಸಲಿದೆ’ ಎಂದು ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ ಹೇಳಿದ್ದಾರೆ. ಮಿಶ್ರ ಧಾತು ನಿಗಮವು ಕೇಂದ್ರ ಸರ್ಕಾರದ ಮಾಲೀಕತ್ವದಲ್ಲಿರುವ ಕಂಪನಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.