ADVERTISEMENT

ಹೀರೊ ಮೋಟರ್ಸ್‌ ಸೇರಿ ಆರು ಕಂಪನಿಗಳ ಐಪಿಒಗೆ ಸೆಬಿ ಒಪ್ಪಿಗೆ

ಪಿಟಿಐ
Published 15 ಸೆಪ್ಟೆಂಬರ್ 2025, 16:03 IST
Last Updated 15 ಸೆಪ್ಟೆಂಬರ್ 2025, 16:03 IST
ಸೆಬಿ
ಸೆಬಿ   

ನವದೆಹಲಿ: ಕೆನರಾ ರೊಬೆಕೊ ಅಸೆಟ್ ಮ್ಯಾನೇಜ್‌ಮೆಂಟ್‌, ಹೀರೊ ಮೋಟರ್ಸ್‌ ಸೇರಿ ಆರು ಕಂಪನಿಗಳು ಸಾರ್ವಜನಿಕರಿಗೆ ಷೇರು ಮಾರಾಟ ಮಾಡುವ ಪ್ರಕ್ರಿಯೆಗೆ (ಐಪಿಒ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ಪಡೆದಿವೆ.

ಪೈನ್‌ ಲ್ಯಾಬ್ಸ್, ಓರ್ಕ್ಲಾ ಇಂಡಿಯಾ, ಮಣಿಪಾಲ್‌ ಪೇಮೆಂಟ್‌ ಆ್ಯಂಡ್ ಐಡೆಂಟಿಟಿ ಸಲ್ಯೂಷನ್ಸ್‌ ಮತ್ತು ಎಮ್ವೀ ಫೋಟೊವೋಲ್ಟಾಯಿಕ್‌ ಪವರ್ ಐಪಿಒಗೆ ಅನುಮತಿ ಪಡೆದ ಇತರೆ ಕಂಪನಿಗಳಾಗಿವೆ. 

ಈ ಕಂಪನಿಗಳು ಸೆಬಿಗೆ ಏಪ್ರಿಲ್‌ ಮತ್ತು ಜುಲೈನಲ್ಲಿ ಐಪಿಒಗೆ ದಾಖಲೆಗಳನ್ನು ಸಲ್ಲಿಸಿದ್ದವು. ಸೆಬಿ ಈ ದಾಖಲೆಗಳನ್ನು ಪರಿಶೀಲಿಸಿದೆ.

ADVERTISEMENT

ಹೀರೊ ಮೋಟರ್ಸ್‌ ₹1,200 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ. ಈಕ್ವಿಟಿ ಷೇರು ಮೂಲಕ ₹800 ಕೋಟಿ ಮತ್ತು ಒಎಫ್‌ಎಸ್‌ನಿಂದ ₹400 ಕೋಟಿ ಸಂಗ್ರಹಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.