ADVERTISEMENT

Union Budget 2021: ಫೆಬ್ರುವರಿ 1, ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 7:17 IST
Last Updated 29 ಜನವರಿ 2021, 7:17 IST
ಬಜೆಟ್ ಪ್ರತಿ ಮುದ್ರಣ ಇಲ್ಲ..
ಬಜೆಟ್ ಪ್ರತಿ ಮುದ್ರಣ ಇಲ್ಲ..   

ನವದೆಹಲಿ: ಫೆಬ್ರುವರಿ 1,ಬೆಳಗ್ಗೆ 11 ಗಂಟೆಗೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ವರದಿ ಹೇಳಿದೆ. ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಫೆಬ್ರುವರಿ 1ರಿಂದ ನಡೆಯಲಿರುವ ಸಂಸತ್‌ನ ಐದನೇ ಅಧಿವೇಶನದಲ್ಲಿ 2021ನೇ ಸಾಲಿನ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ.

ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಳಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7.5 ಜಿಡಿಪಿ ಬೆಳವಣಿಗೆ ನಿರೀಕ್ಷಿಸಲಾಗಿದೆ. ಕೋವಿಡ್ 19 ಲಾಕ್‌ಡೌನ್ ತೆರವಿನ ಬಳಿಕ ತೆರಿಗೆ ಮತ್ತು ಆದಾಯ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ.

ಬಜೆಟ್ ಪ್ರತಿ ಮುದ್ರಣ ಇಲ್ಲ!

ADVERTISEMENT

ಈ ಬಾರಿ ಬಜೆಟ್ ಪ್ರತಿಯನ್ನು ಮುದ್ರಿಸಲಾಗುವುದಿಲ್ಲ, ಅದರ ಬದಲು ಸಂಸತ್ ಸದಸ್ಯರಿಗೆ ಮತ್ತು ಸಂಬಂ‌ಧಪಟ್ಟ ಇಲಾಖೆಗಳಿಗೆ ಡಿಜಿಟಲ್ ಪ್ರತಿ ನೀಡಲು ಸರ್ಕಾರ ಮುಂದಾಗಿದೆ. ದೇಶದ ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಮುದ್ರಿತ ಬಜೆಟ್ ಪ್ರತಿ ಇಲ್ಲದೆಯೇ ಬಜೆಟ್ ಮಂಡನೆ ನಡೆಯಲಿದೆ. ನವೆಂಬರ್ 26, 1947ರಂದು ದೇಶದ ಮೊದಲ ಬಜೆಟ್ ನಡೆದಿತ್ತು. ಅದಾದ ಬಳಿಕ ಪ್ರತಿವರ್ಷವೂ ಬಜೆಟ್ ಪ್ರತಿ ಮುದ್ರಿಸಿ ಸಂಸದರಿಗೆ ಹಂಚಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.