ADVERTISEMENT

Coconut Oil Price: ಕೊಬ್ಬರಿ ಎಣ್ಣೆ ಲೀಟರ್‌ಗೆ ₹500

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 16:53 IST
Last Updated 11 ಜುಲೈ 2025, 16:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಮಂಗಳೂರು: ಮಂಗಳೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆ ದರ ಲೀಟರ್‌ಗೆ ₹420ರಿಂದ ₹500ರ ವರೆಗೆ ಇದೆ.

ADVERTISEMENT

ಸ್ಟೀಲ್ ಗಾಣದಲ್ಲಿ ತಯಾರಿಸಿದ ಕೊಬ್ಬರಿ ಎಣ್ಣೆ ಲೀಟರ್‌ಗೆ ₹450 ಮತ್ತು ಮರದ ಗಾಣದಲ್ಲಿ ತಯಾರಿಸಿದ ಎಣ್ಣೆ ಲೀಟರ್‌ಗೆ ₹500 ದರವಿದೆ. ಕೊಬ್ಬರಿ ದರ ಹಿಂದೆ ಕೆ.ಜಿ.ಗೆ ₹95 ಇದ್ದಾಗ ಲೀಟರ್ ಎಣ್ಣೆ ₹220ಕ್ಕೆ ಸಿಗುತ್ತಿತ್ತು, ಈಗ ಕೊಬ್ಬರಿ ದರ ₹280 ಆಗಿದೆ ಎನ್ನುತ್ತಾರೆ ಗಾಣದ ಮಾಲೀಕರು.

‘ತೆಂಗಿನಕಾಯಿ ಕೆ.ಜಿ.ಗೆ ₹85 ತಲುಪಿದೆ. ಕೊಬ್ಬರಿ ದರ ₹250ರಿಂದ ₹300 ಆಗಿದೆ. ಕಾಯಿಯ ಚಿಪ್ಪಿಗೂ ಬೇಡಿಕೆ ಬಂದಿದೆ’ ಎನ್ನುತ್ತಾರೆ ಬೆಳೆಗಾರ ಉದಯ್ ಬೋಳಂತೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.