ADVERTISEMENT

Pepsico vs Coca Cola: ಹಾಫ್‌ ಟೈಂ- ಎನಿ ಟೈಂ ಜಾಹೀರಾತು ಜಟಾಪಟಿ

ಪಿಟಿಐ
Published 4 ಮಾರ್ಚ್ 2025, 16:09 IST
Last Updated 4 ಮಾರ್ಚ್ 2025, 16:09 IST
<div class="paragraphs"><p>ಎಕ್ಸ್ ಚಿತ್ರ</p></div>
   

ಎಕ್ಸ್ ಚಿತ್ರ

ನವದೆಹಲಿ: ತಂಪು ಪಾನೀಯ ತಯಾರಿಕಾ ಕಂಪನಿಗಳಾದ ಪೆಪ್ಸಿಕೊ ಮತ್ತು ಕೋಕಾ ಕೋಲಾ ಕಂಪನಿಗಳು ಜಾಹೀರಾತುಗಳ ಮೂಲಕ ಪರಸ್ಪರ ಕಾಲೆಳೆದುಕೊಳ್ಳುವುದು ಈ ಬೇಸಿಗೆಯಲ್ಲೂ ಮುಂದುವರಿದಿದೆ.

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಸಂದರ್ಭದಲ್ಲಿ ಕೋಕಾ ಕೋಲಾ ಕಂಪನಿಯು ‘ಹಾಫ್‌ ಟೈಂ’ ಎಂಬ ಅಡಿಬರಹದೊಂದಿಗೆ ತನ್ನ ಪಾನೀಯದ ಜಾಹೀರಾತು ನೀಡಿತ್ತು. ಪ್ರತಿಸ್ಪರ್ಧಿ ಪೆಪ್ಸಿಕೊ ಕಂಪನಿಯು ಇದಕ್ಕೆ ಪ್ರತಿಯಾಗಿ ‘ಎನಿ ಟೈಂ’ ಎಂಬ ಒಕ್ಕಣೆಯೊಂದಿಗೆ ಪತ್ರಿಕೆಗಳಿಗೆ ಜಾಹೀರಾತು ನೀಡಿ ಟಕ್ಕರ್ ನೀಡಿದೆ.

ADVERTISEMENT

ಕೋಕಾ ಕೋಲಾದ ‘ಹಾಫ್‌ ಟೈಂ’ ಜಾಹೀರಾತು ಟಿ.ವಿ. ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಕಳೆದ ಒಂದು ತಿಂಗಳಿಂದ ಪ್ರಸಾರವಾಗುತ್ತಿದೆ. ಬಿಡುವಿನ ಸಂದರ್ಭದಲ್ಲಿ ತಣ್ಣನ ಪಾನೀಯ ಹೀರುವ ಕುರಿತ ಜಾಹೀರಾತು ಇದಾಗಿದೆ. 

ಇದಕ್ಕೆ ಟಕ್ಕರ್ ನೀಡುವಂತಿರುವ ಪೆಪ್ಸಿಕೊ ಜಾಹೀರಾತಿನಲ್ಲಿ, ‘ಯಾವುದೋ ಒಂದು ನಿರ್ದಿಷ್ಟ ಸಮಯಕ್ಕಾಗಿ ಏಕೆ ಕಾಯುತ್ತೀರಿ. ಪ್ರತಿ ಸಮಯವೂ ಉತ್ತಮ ಸಮಯ. ಹೀಗಾಗಿ ಸದಾ ಕೈಯಲ್ಲಿ ಪೆಪ್ಸಿ ಹಿಡಿದಿರಿ. ಮೊದಲ ಬಾರಿ, ಬಾಯಾರಿ, ದಿನದ ಸಮಯದಲ್ಲಿ, ಆಟವಾಡುವಾಗ, ತರಗತಿಯಲ್ಲಿ, ಗೆಳೆಯರೊಂದಿಗೆ, ಕುರುಕಲು ತಿಂಡಿ ತಿನ್ನುವಾಗ, ಮಧ್ಯಾಹ್ನ ಊಟದಲ್ಲಿ, ಸಂಭ್ರಮದಲ್ಲಿ, ಮತ್ತೊಂದು ಬಾರಿ, ರಾತ್ರಿ ಊಟದಲ್ಲಿ, ಗೆದ್ದ ಸಂಭ್ರಮದಲ್ಲಿ, ಬೇಸರವಾದಾಗ, ಪಟ್ಟಣದಲ್ಲಿರುವಾಗ, ಎಲ್ಲರೂ ಜತೆಗೂಡಿದಾಗ ಹೀಗೆ ಎಲ್ಲಾ ಸಂದರ್ಭದಲ್ಲೂ ಪೆಪ್ಸಿ ಹೀರಿ’ ಎಂದು ಜಾಹೀರಾತು ಪ್ರಕಟಿಸಿದೆ.

1996ರ ಕ್ರಿಕೆಟ್‌ ಸಂದರ್ಭದಿಂದಲೂ ಎರಡೂ ಕಂಪನಿಗಳ ನಡುವೆ ಜಾಹೀರಾತು ಜಟಾಪಟಿ ನಡೆದಿದೆ. ಕೋಕಾ ಕೋಲಾ ಕಂಪನಿಯು ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ಕ್ರಿಕೆಟ್ ವಿಶ್ವಕಪ್ ಪ್ರಾಯೋಜಿಸಿತ್ತು. ಇದೇ ಸಂದರ್ಭದಲ್ಲಿ ಪೆಪ್ಸಿ ಜಾಹೀರಾತು ಪ್ರಕಟಿಸಿ ‘ನಥಿಂಗ್ ಅಫಿಷಯಲ್ ಅಬೌಟ್ ಇಟ್‌’ ಎಂದಿತ್ತು. 

ಈ ಜಾಹೀರಾತು ಸಮರದಲ್ಲಿ ಜಾಹೀರಾತು ಸಿದ್ಧಪಡಿಸುವವರ ಸೃಜನಶೀಲತೆ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.