ADVERTISEMENT

ಉಳಿತಾಯದಲ್ಲಿ ಹೆಚ್ಚಳ: ವೃತ್ತಿಪರರ ವಿಶ್ವಾಸ

ಲಾಕ್‌ಡೌನ್‌ ನಿಯಮಗಳ ಸಡಿಲಿಕೆ

ಪಿಟಿಐ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸುತ್ತಿರುವುದರಿಂದಾಗಿ, ಮುಂದಿನ ಆರು ತಿಂಗಳಿನಲ್ಲಿ ವೈಯಕ್ತಿಕ ಉಳಿತಾಯದಲ್ಲಿ ಏರಿಕೆಯಾಗಲಿದೆ ಎಂದು ವೃತ್ತಿಪರರಲ್ಲಿಶೇಕಡ 33ರಷ್ಟು ಜನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ವೈಯಕ್ತಿಕ ವೆಚ್ಚವು ಈಗಿರುವಂತೆಯೇ ಇರಲಿದೆ ಎಂದು ವೃತ್ತಿಪರರ ಪೈಕಿಶೇ 40ರಷ್ಟು ಜನ ಹೇಳಿದ್ದಾರೆ.

ಲಿಂಕ್ಡ್‌ಇನ್‌ ವರ್ಕ್‌ಫೋರ್ಸ್‌ ಕಾನ್ಫಿಡೆನ್ಸ್‌ ಇಂಡೆಕ್ಸ್‌ನಿಂದ ಈ ಮಾಹಿತಿ ದೊರೆತಿದೆ. ಲಿಂಕ್ಡ್‌ಇನ್‌ ಕಂಪನಿಯು 13 ವಿವಿಧ ಕೈಗಾರಿಕೆಗಳ 2,899 ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದೆ.

ಜೂನ್‌ನಲ್ಲಿ ನಡೆಸಿದ್ದ ಸಮೀಕ್ಷೆಯ ಸಂದರ್ಭದಲ್ಲಿ ವೃತ್ತಿಪರರ ಆತ್ಮವಿಶ್ವಾಸದ ಸೂಚ್ಯಂಕ 50 ಇತ್ತು. ಜೂನ್‌ 29ರಿಂದ ಜುಲೈ 26ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಅದು 53ಕ್ಕೆ ಏರಿಕೆಯಾಗಿದೆ.

ADVERTISEMENT

ಉದ್ಯೋಗ ಭದ್ರತೆ: ಉದ್ಯೋಗ ಭದ್ರತೆ ವಿಷಯದಲ್ಲಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಲ್ಲಿ (1–200 ಕೆಲಸಗಾರರು) ಕೆಲಸ ಉಳಿಯಲಿದೆ ಎನ್ನುವ ಯಾವುದೇ ಭರವಸೆ ಇಲ್ಲದಂತಾಗಿದೆ. ಆದರೆ, 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವ ಉದ್ದಿಮೆಗಳಲ್ಲಿ ಕೆಲಸದಲ್ಲಿ ಮುಂದುವರಿಯವ ಬಗ್ಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ.

ಕೆಲಸಕ್ಕೆ ಹಾಜರಾಗಲು ಸಿದ್ಧವಿರುವ ವೃತ್ತಿಪರರು

46%:ಮನರಂಜನೆ ಮತ್ತು ಪ್ರವಾಸ ಉದ್ಯಮ ಕ್ಷೇತ್ರ

39%:ಗ್ರಾಹಕ ಬಳಕೆ ಉತ್ಪನ್ನಗಳ ಉದ್ಯಮ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.