ADVERTISEMENT

ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ₹10 ಇಳಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 15:22 IST
Last Updated 31 ಮಾರ್ಚ್ 2021, 15:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಲ್‌ಪಿಜಿ ದರವು ಗುರುವಾರದಿಂದ ಪ್ರತಿ ಸಿಲಿಂಡರ್‌ಗೆ ₹ 10ರಷ್ಟು ಕಡಿಮೆ ಆಗಲಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ಹೇಳಿದೆ.

ಇದರಿಂದಾಗಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ ₹ 822 ಇದ್ದಿದ್ದು ₹ 812ಕ್ಕೆ ಇಳಿಕೆ ಕಾಣಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆ ಆಗಿರುವುದರಿಂದ ಎಲ್‌ಜಿಪಿ ದರದಲ್ಲಿಯೂ ಇಳಿಕೆ ಮಾಡಲಾಗಿದೆ.

ADVERTISEMENT

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಜತೆಗೇ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲೂ ಏರಿಕೆಯಾಗಿತ್ತು. ಕಳೆದ ವಾರಗಳಲ್ಲಿ ಸಿಲಿಂಡರ್ ಬೆಲೆಯಲ್ಲಿ ಒಟ್ಟಾರೆ ₹125 ಏರಿಕೆಯಾಗಿತ್ತು.

ಪೆಟ್ರೋಲ್ ಮತ್ತು ಡೀಸೆಲ್ ದರ ದಿನವೂ ಪರಿಷ್ಕರಣೆಯಾಗುತ್ತಿದ್ದರೆ, ಎಲ್‌ಪಿಜಿ ದರ ಪ್ರತಿ ತಿಂಗಳ ಮೊದಲ ದಿನವೇ ಪರಿಷ್ಕರಣೆಯಾಗುತ್ತದೆ.

ಪ್ರಸ್ತುತ ಏಪ್ರಿಲ್ ತಿಂಗಳ ದರ ಪರಿಷ್ಕರಣೆ ಅನ್ವಯ, ಎಲ್‌ಪಿಜಿ ಸಿಲಿಂಡರ್ ಬೆಲೆ ₹10 ಇಳಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.