ADVERTISEMENT

ಬ್ಯಾಂಕ್‌ಗಳ ಸಾಲ ನೀಡಿಕೆ ಶೇ 12ಕ್ಕೆ ಹೆಚ್ಚಳ ನಿರೀಕ್ಷೆ: ಕ್ರಿಸಿಲ್

ಪಿಟಿಐ
Published 15 ಸೆಪ್ಟೆಂಬರ್ 2025, 15:28 IST
Last Updated 15 ಸೆಪ್ಟೆಂಬರ್ 2025, 15:28 IST
ಬ್ಯಾಂಕ್‌
ಬ್ಯಾಂಕ್‌    

ಮುಂಬೈ: ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣ ಶೇ 12ರಷ್ಟು ಹೆಚ್ಚಳವಾಗಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್‌ ಸೋಮವಾರ ತಿಳಿಸಿದೆ. ಕಾರ್ಪೊರೇಟ್‌ ಕಂಪನಿಗಳಿಗೆ ನೀಡುವ ಸಾಲದ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದೆ. 

ಬ್ಯಾಂಕ್‌ಗಳಲ್ಲಿ ಕುಟುಂಬಗಳು ಇರಿಸುತ್ತಿರುವ ಠೇವಣಿ ಪ್ರಮಾಣ ಕಡಿಮೆ ಆಗಿದೆ. ಇದು ಒಟ್ಟಾರೆ ಠೇವಣಿ ಸ್ಥಿರತೆ ಮತ್ತು ಸಣ್ಣ ಉದ್ದಿಮೆಗಳಿಗೆ ನೀಡುವ ಸಾಲದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.

‘ಜೂನ್‌ ತ್ರೈಮಾಸಿಕದಲ್ಲಿ ಸಾಲ ನೀಡಿಕೆ ಪ್ರಮಾಣ ಶೇ 9.5ರಷ್ಟಿತ್ತು. ಈಗ ಅದು ಶೇ 10ರಷ್ಟಿದೆ. ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಸಾಲದ ನೀಡಿಕೆಯು ತ್ವರಿತ ಬೆಳವಣಿಗೆ ಕಾಣಲಿದ್ದು, ಶೇ 11ರಿಂದ ಶೇ 12ರಷ್ಟಾಗಬಹುದು’ ಎಂದು ಕ್ರಿಸಿಲ್‌ನ ಮುಖ್ಯ ರೇಟಿಂಗ್ ಅಧಿಕಾರಿ ಕೃಷ್ಣನ್ ಸೀತಾರಾಮನ್ ಹೇಳಿದ್ದಾರೆ.

ADVERTISEMENT

2025–26ರ ಆರ್ಥಿಕ ವರ್ಷದಲ್ಲಿ ಒಟ್ಟು ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಜಿಎನ್‌ಪಿಎ) ಶೇ 2.3ರಿಂದ ಶೇ 2.5ಕ್ಕೆ ಏರಿಕೆ ಆಗಲಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.