ADVERTISEMENT

ಹೆಚ್ಚುವರಿ 600 ಪಾಸ್‌ಪೋರ್ಟ್‌ ಸೇವಾ ಕೇಂದ್ರ ಸ್ಥಾಪನೆ: ಜ್ಯೋತಿರಾದಿತ್ಯ ಸಿಂಧಿಯಾ

ಪಿಟಿಐ
Published 13 ಡಿಸೆಂಬರ್ 2024, 15:57 IST
Last Updated 13 ಡಿಸೆಂಬರ್ 2024, 15:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಅಂಚೆ ಕಚೇರಿಗಳಲ್ಲಿ ಹೆಚ್ಚುವರಿಯಾಗಿ 600 ‍ಪಾರ್ಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ತೆರೆಯಲು ಅಂಚೆ ಇಲಾಖೆ ಮತ್ತು ವಿದೇಶಾಂಗ ಸಚಿವಾಲಯವು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಭಾರತೀಯ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಂಚೆ ಇಲಾಖೆಯು ದೇಶದಾದ್ಯಂತ 6.40 ಲಕ್ಷ ಕಚೇರಿಗಳನ್ನು ಹೊಂದಿದೆ. ವಿಶ್ವದ ಯಾವುದೇ ದೇಶವು ಇಷ್ಟು ಸಂಖ್ಯೆಯ ಕೇಂದ್ರಗಳನ್ನು ಹೊಂದಿಲ್ಲ’ ಎಂದರು.

ಜನರಿಗೆ ಪಾಸ್‌ಪೋರ್ಟ್‌ ಸೇವೆ ಒದಗಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. 2028–29ರೊಳಗೆ ಈ ಹೆಚ್ಚುವರಿ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು. ಇವುಗಳ ಮೂಲಕ ವಾರ್ಷಿಕವಾಗಿ ಒಂದು ಕೋಟಿ ಜನರಿಗೆ ಸೇವೆ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ADVERTISEMENT

2017ರಲ್ಲಿ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆಯಲಾಗಿದೆ. ಹಾಲಿ ಇರುವ 442 ಕೇಂದ್ರಗಳ ಮೂಲಕ ಇಲ್ಲಿಯವರೆಗೆ 1.52 ಕೋಟಿಗೂ ಹೆಚ್ಚು ಜನರಿಗೆ ಪಾಸ್‌ಪೋರ್ಟ್‌ ಸಂಬಂಧಿತ ಸೇವೆ ಒದಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.