ADVERTISEMENT

ಗುಣಮಟ್ಟ ಇಲ್ಲದ ಪ್ರೆಷರ್ ಕುಕ್ಕರ್ ಮಾರಾಟ: ಅಮೆಜಾನ್ ಸೇರಿ 5 ಕಂಪನಿಗಳಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 15:36 IST
Last Updated 22 ನವೆಂಬರ್ 2021, 15:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತೀಯ ಗುಣಮಟ್ಟ ಮಂಡಳಿ (ಬಿಐಎಸ್‌) ನಿಯಮಗಳಿಗೆ ಅನುಗುಣವಾಗಿ ಇಲ್ಲದ ಪ್ರೆಷರ್‌ ಕುಕ್ಕರ್‌ಗಳನ್ನು ಮಾರಾಟಕ್ಕೆ ಇರಿಸಿದ್ದಕ್ಕಾಗಿ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಅಮೆಜಾನ್, ಫ್ಲಿಪ್‌ಕಾರ್ಟ್‌, ಪೇಟಿಎಂ ಮಾಲ್‌ ಸೇರಿದಂತೆ ಇ–ವಾಣಿಜ್ಯ ವಲಯದ ಐದು ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಸ್ನ್ಯಾಪ್‌ಡೀಲ್‌ ಮತ್ತು ಶಾಪ್‌ಕ್ಲೂಸ್‌ ಕಂಪನಿಗಳಿಗೆ ಹಾಗೂ ಕೆಲವು ಮಾರಾಟಗಾರರಿಗೆ ಕೂಡ ನೋಟಿಸ್‌ ಜಾರಿಯಾಗಿದೆ. ಈ ಕಂಪನಿಗಳು ಏಳು ದಿನಗಳ ಒಳಗೆ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ.

ಬಿಐಎಸ್‌ ಆದೇಶದ ಪ್ರಕಾರ, ಪ್ರೆಷರ್ ಕುಕ್ಕರ್‌ಗಳು ಭಾರತೀಯ ಗುಣಮಟ್ಟ ಮಾನದಂಡಕ್ಕೆ ಅನುಗುಣವಾಗಿ ಇರಬೇಕು. ಇಲ್ಲವಾದಲ್ಲಿ ಅವುಗಳನ್ನು ದೋಷಯುಕ್ತ ಉತ್ಪನ್ನಗಳು ಎಂದು ಪರಿಗಣಿಸಲು ಅವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.