ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಣಾ ಕಪೂರ್‌ ವಿಚಾರಣೆ

ಜಾರಿ ನಿರ್ದೇಶನಾಲಯದ ಕ್ರಮ

ಪಿಟಿಐ
Published 7 ಮಾರ್ಚ್ 2020, 20:00 IST
Last Updated 7 ಮಾರ್ಚ್ 2020, 20:00 IST
ರಾಣಾ ಕಪೂರ್‌
ರಾಣಾ ಕಪೂರ್‌   

ನವದೆಹಲಿ:ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ ಅವರ ಮುಂಬೈ ನಿವಾಸದಲ್ಲಿ ಶುಕ್ರವಾರ ರಾತ್ರಿ ಶೋಧ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರವೂ ದೆಹಲಿ ಮತ್ತು ಮುಂಬೈನ ಕೆಲವು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದರು.

ಶನಿವಾರ ಅವರನ್ನು ಇ.ಡಿಯ ಕಚೇರಿಗೆ ಕರೆತಂದು ಏಳು ಗಂಟೆಗಳವರೆಗೆ ವಿಚಾರಣೆಗೆ ಒಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿ
ಕೊಂಡಿದ್ದಾರೆ.

ರಾಣಾ ಅವರ ಪುತ್ರಿಯರಾದ ರಾಖೀ ಕಪೂರ್‌ ಟಂಡನ್‌, ರೋಶ್ನಿ ಕಪೂರ್‌ ಮತ್ತು ರಾಧಾ ಕಪೂರ್‌ ಅವರಿಗೆ ಸೇರಿರುವ ಮನೆಗಳಲ್ಲಿಯೂ ಶೋಧ ಕಾರ್ಯ ನಡೆಸಲಾಯಿತು.

ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಕ್ಕೂಟ ಆಗ್ರಹ:ಖಾಸಗಿ ವಲಯದ ಬ್ಯಾಂಕ್‌ಗಳು ಒಂದೊಂದಾಗಿ ವೈಫಲ್ಯ ಅನುಭವಿಸುತ್ತಿವೆ. ಹೀಗಾಗಿ ಖಾಸಗಿ ಬ್ಯಾಂಕ್‌ಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಅಖಿಲ ಭಾರತ ಬ್ಯಾಂಕ್‌ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಆಗ್ರಹಿಸಿದೆ.

ಕಷ್ಟಪಟ್ಟು ಉಳಿಸಿದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಡಲಾಗುತ್ತದೆ. ಅದನ್ನು ಬ್ಯಾಂಕ್‌ಗಳು ಸಮರ್ಪಕವಾಗಿ ನಿರ್ವಹಿಸದೇ ಇದ್ದರೆ ಅದಕ್ಕೆ ಕಾರಣರಾದ ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕ್ರಮ ಜರುಗಿಸಬೇಕು ಎಂದು ಹೇಳಿದೆ. ಗ್ರಾಹಕರು ಖಾತೆಯಿಂದ ಹಣ ಪಡೆಯಲು ಶನಿವಾರವೂ ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.