ನವದೆಹಲಿ: ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟವು ಜುಲೈ ತಿಂಗಳಿನಲ್ಲಿ ಶೇ 93ರಷ್ಟು ಏರಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಶುಕ್ರವಾರ ತಿಳಿಸಿದೆ.
ಕಳೆದ ಜುಲೈನಲ್ಲಿ 8,037 ವಾಹನಗಳು ಮಾರಾಟವಾಗಿದ್ದವು. ಈ ಬಾರಿ 15,528 ಮಾರಾಟವಾಗಿವೆ ಎಂದು ತಿಳಿಸಿದೆ.
ಟಾಟಾ ಮೋಟರ್ಸ್ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ 19ರಷ್ಟು ಹೆಚ್ಚಳವಾಗಿದ್ದು, 6,047 ವಾಹನಗಳು ಮಾರಾಟವಾಗಿವೆ. ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 4ರಷ್ಟು ಕಡಿಮೆಯಾಗಿದ್ದು, 1,02,973 ವಾಹನಗಳು ಮಾರಾಟವಾಗಿವೆ.
ಟಿವಿಎಸ್ ಮೋಟರ್ ಕಂಪನಿಯ 22,256 ವಾಹನಗಳು ಮಾರಾಟವಾಗಿವೆ. ಕಳೆದ ಜುಲೈನಲ್ಲಿ 19,655 ಮಾರಾಟವಾಗಿದ್ದವು. ವಿದ್ಯುತ್‌ಚಾಲಿತ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ 9ರಷ್ಟು ಹೆಚ್ಚಳವಾಗಿದ್ದು, 69,146 ಮಾರಾಟವಾಗಿವೆ. ಮಹೀಂದ್ರ ಸಮೂಹದ 9,766 ವಾಹನಗಳು ಮಾರಾಟವಾಗಿವೆ. ವಿದ್ಯುತ್‌ಚಾಲಿತ ವಾಣಿಜ್ಯ ವಾಹನಗಳ ಚಿಲ್ಲರೆ ಮಾರಾಟವು ಶೇ 52ರಷ್ಟು ಹೆಚ್ಚಳವಾಗಿದ್ದು, 1,244 ಮಾರಾಟವಾಗಿವೆ.
‘ಸರ್ಕಾರದ ಯೋಜನೆಗಳ ಬೆಂಬಲ, ಹಣಕಾಸಿನ ನೆರವು, ಚಾಜಿಂಗ್ ಮೂಲಸೌಕರ್ಯ ಕೇಂದ್ರಗಳ ತ್ವರಿತ ವಿಸ್ತರಣೆಯು ವಾಹನಗಳ ಮಾರಾಟದ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಎಫ್‌ಎಡಿಎ ಅಧ್ಯಕ್ಷ ಸಿ.ಎಸ್.ವಿಘ್ನೇಶ್ವರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.