ADVERTISEMENT

ವಿಶ್ವದ ಮೊದಲ ಟ್ರಿಲಿಯನೇರ್‌ ಆಗುವರೇ ಮಸ್ಕ್‌?

ನೂತನ ವೇತನ ಪ್ಯಾಕೇಜ್‌ ಪ್ರಸ್ತಾಪಿಸಿದ ಟೆಸ್ಲಾ ಆಡಳಿತ ಮಂಡಳಿ

ಏಜೆನ್ಸೀಸ್
Published 5 ಸೆಪ್ಟೆಂಬರ್ 2025, 16:06 IST
Last Updated 5 ಸೆಪ್ಟೆಂಬರ್ 2025, 16:06 IST
ಇಲಾನ್‌ ಮಸ್ಕ್‌
ಇಲಾನ್‌ ಮಸ್ಕ್‌   

ನ್ಯೂಯಾರ್ಕ್‌: ಟೆಸ್ಲಾ ಕಂಪನಿಯ ಆಡಳಿತ ಮಂಡಳಿಯು ನೂತನ ವೇತನ ಪ್ಯಾಕೇಜ್‌ ಅನ್ನು ಶುಕ್ರವಾರ ಪ್ರಸ್ತಾಪಿಸಿದ್ದು, ಮಹತ್ವಾಕಾಂಕ್ಷೆಯ ಕಾರ್ಪೊರೇಟ್‌ ಗುರಿಗಳನ್ನು ತಲುಪಿದಲ್ಲಿ ಕಂಪನಿಯ ಸಿಇಒ ಇಲಾನ್‌ ಮಸ್ಕ್‌ ಅವರು ವಿಶ್ವದ ಮೊದಲ ಟ್ರಿಲಿಯನೇರ್‌ ಆಗುವ ಸಾಧ್ಯತೆ ಇದೆ.

‘ಸೆಕ್ಯುರಿಟೀಸ್‌ ಫೈಲಿಂಗ್‌’ ಪ್ರಕಾರ, ಈಗಾಗಲೇ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್‌, ವೇತನ ಪ್ಯಾಕೇಜ್‌ನ ಸಂಪೂರ್ಣ ಮೌಲ್ಯವನ್ನು ಸಂಗ್ರಹಿಸಲು ಮುಂದಿನ ದಶಕದಲ್ಲಿ ಟೆಸ್ಲಾ ಷೇರು ಮಾರುಕಟ್ಟೆ ಮೌಲ್ಯವನ್ನು ಎಂಟು ಪಟ್ಟು ಹೆಚ್ಚಿಸಬೇಕಾಗುತ್ತದೆ.

ಟೆಸ್ಲಾ ಕಂಪನಿಯ ಷೇರುದಾರರು ಅನುಮೋದಿಸಬೇಕಾದ ಪ್ಯಾಕೇಜ್‌ ಅನ್ನು ನ.6ರಂದು ನಡೆಯುವ ವಾರ್ಷಿಕ ಸಭೆಯಲ್ಲಿ ಮತಕ್ಕೆ ಹಾಕುವ ಸಾಧ್ಯತೆ ಇದೆ.

ADVERTISEMENT

ಫೋರ್ಬ್ಸ್‌ ಪ್ರಕಾರ, ಮಸ್ಕ್‌ ಅವರ ನಿವ್ವಳ ಮೌಲ್ಯ 40 ಸಾವಿರ ಕೋಟಿ ಡಾಲರ್‌ ಇದೆ. ಟೆಸ್ಲಾ ಷೇರು ಮಾರುಕಟ್ಟೆ ಮೌಲ್ಯವನ್ನು ಭವಿಷ್ಯದಲ್ಲಿ 1.1 ಲಕ್ಷ ಕೋಟಿ ಡಾಲರ್‌ನಿಂದ 8.5 ಲಕ್ಷ ಕೋಟಿ ಡಾಲರ್‌ಗೆ ಏರಿಸಲು ಯಶಸ್ವಿಯಾದರೆ ಹೊಸ ವೇತನವು ಅವರ ಸಂಪತ್ತಿಗೆ 90 ಸಾವಿರ ಕೋಟಿ ಡಾಲರ್‌ ಸೇರಿಸಬಹುದು. ಇದರಿಂದ ಕಾರ್ಪೊರೇಟ್‌ ಇತಿಹಾಸದಲ್ಲೇ ಯಾವುದೇ ಕಾರ್ಯನಿರ್ವಾಹಕರಿಗಿಂತ ಹೆಚ್ಚಿನ ಪರಿಹಾರ ಸಿಕ್ಕಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.