ADVERTISEMENT

ದೇಶದ ರಫ್ತು, ಆಮದು ವಹಿವಾಟು ಜುಲೈನಲ್ಲಿ ಇಳಿಕೆ

ಪಿಟಿಐ
Published 14 ಆಗಸ್ಟ್ 2023, 23:30 IST
Last Updated 14 ಆಗಸ್ಟ್ 2023, 23:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ರಫ್ತು ವಹಿವಾಟು ಜುಲೈನಲ್ಲಿ ಶೇಕಡ 15.88ರಷ್ಟು ಇಳಿಕೆ ಕಂಡು ₹2.64 ಲಕ್ಷ ಕೋಟಿಗೆ ತಲುಪಿದೆ. ಜಾಗತಿಕ ಬೇಡಿಕೆ ಇಳಿಕೆ ಕಂಡಿರುವುದು ಹಾಗೂ ಪೆಟ್ರೋಲಿಯಂ, ಹರಳು ಮತ್ತು ಚಿನ್ನಾಭರಣಗಳ ರಫ್ತು ಇಳಿಕೆ ಕಂಡಿರುವುದೇ ರಫ್ತು ಕಡಿಮೆ ಆಗಲು ಕಾರಣ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಆಮದು ವಹಿವಾಟು ಸಹ ಜುಲೈನಲ್ಲಿ ಶೇ 17ರಷ್ಟು ಕಡಿಮೆ ಆಗಿದ್ದು, ₹4.33 ಲಕ್ಷ ಕೋಟಿ ಆಗಿದೆ. ರಫ್ತು ಮತ್ತು ಆಮದು ವಹಿವಾಟು ಇಳಿಕೆ ಆಗಿರುವುದರಿಂದ ವ್ಯಾಪಾರ ಕೊರತೆ ಅಂತರವು ₹2.08 ಲಕ್ಷ ಕೋಟಿಯಿಂದ ₹1.69 ಲಕ್ಷ ಕೋಟಿಗೆ ಇಳಿಕೆ ಕಂಡಿದೆ. ಚಿನ್ನದ ಆಮದು ಶೇ 2.7ರಷ್ಟು ಹೆಚ್ಚಾಗಿದ್ದರೆ, ತೈಲ ಆಮದು ಶೇ 23.4ರಷ್ಟು ಇಳಿಕೆ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ರಫ್ತು ವಹಿವಾಟು ಶೇ 14.5ರಷ್ಟು, ಆಮದು ವಹಿವಾಟು ಶೇ 13.79ರಷ್ಟು ಇಳಿಕೆ ಆಗಿದೆ.

ADVERTISEMENT

ಅಮೆರಿಕ, ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಆಮದು ವಹಿವಾಟು ಇಳಿಕೆ ಕಂಡಿದೆ. ಈ ವಲಯಗಳಲ್ಲಿ ಆಮದು ನಿರಂತರವಾಗಿ ಇಳಿಕೆ ಕಾಣುತ್ತಿದೆ. ಹೀಗಿದ್ದರೂ 2023–24ನೇ ಹಣಕಾಸು ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ರಫ್ತು ವಹಿವಾಟು ಹಿಂದಿನ ಹಣಕಾಸು ವರ್ಷಕ್ಕಿಂತಲೂ ಹೆಚ್ಚಿಗೆ ಇರುವ ಭರವಸೆ ಇದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್‌ ಬಿ. ಹೇಳಿದ್ದಾರೆ. 2022–23ರಲ್ಲಿ ಸರಕು ಮತ್ತು ಸೇವೆಗಳ ಒಟ್ಟು ರಫ್ತು ಮೌಲ್ಯವು ₹63.63 ಲಕ್ಷ ಕೋಟಿಯಷ್ಟು ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.