ADVERTISEMENT

ಜನವರಿಯಲ್ಲಿ ಫೇಸ್‌ಬುಕ್‌ ಕ್ರಿಪ್ಟೊಕರೆನ್ಸಿ

ರಾಯಿಟರ್ಸ್
Published 27 ನವೆಂಬರ್ 2020, 21:12 IST
Last Updated 27 ನವೆಂಬರ್ 2020, 21:12 IST

ಲಂಡನ್: ಫೇಸ್‌ಬುಕ್‌ ಕಂಪನಿಯ ಕ್ರಿಪ್ಟೊಕರೆನ್ಸಿ ‘ಲಿಬ್ರಾ’ ಜನವರಿ ವೇಳೆಗೆ ಚಲಾವಣೆಗೆ ಬರಲಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಜಿನಿವಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಲಿಬ್ರಾ ಅಸೋಸಿಯೇಷನ್, ಈ ಕ್ರಿಪ್ಟೊಕರೆನ್ಸಿಯನ್ನು ಚಲಾವಣೆಗೆ ಬಿಡಲಿದೆ.

ಲಿಬ್ರಾ ಅಸೋಸಿಯೇಷನ್‌ನಲ್ಲಿ ಫೇಸ್‌ಬುಕ್‌ ಕೂಡ ಸದಸ್ಯ ಕಂಪನಿ. ಲಿಬ್ರಾ ಕ್ರಿಪ್ಟೊಕರೆನ್ಸಿಯನ್ನು ಫೇಸ್‌ಬುಕ್‌ ಕಳೆದ ವರ್ಷ ಅನಾವರಣ ಮಾಡಿತ್ತು. ಆದರೆ, ಈ ಕ್ರಿಪ್ಟೊಕರೆನ್ಸಿಯು ಹಣಕಾಸಿನ ಸ್ಥಿರತೆಗೆ ಅಪಾಯ ತಂದೊಡ್ಡಬಹುದು ಎಂದು ಜಗತ್ತಿನ ಹಲವು ಕೇಂದ್ರೀಯ ಬ್ಯಾಂಕ್‌ಗಳು ಕಳವಳ ವ್ಯಕ್ತಪಡಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT